ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜು.09: 2023-24 ನೇ ಸಾಲಿನ 2ನೇ ಸುತ್ತಿನ ಕುಸುಗಲ್ಲ ಗ್ರಾಮಸಭೆಯನ್ನು ಜ.18 ರಂದು ಬೆಳಿಗ್ಗೆ 11.00 ಕ್ಕೆ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಜ.18 ರಂದು ವಿವಿಧ ವಾರ್ಡ್‍ಗಳ ಸಭೆಗಳು ನಡೆಯಲಿವೆ. ವಿವಿಧ ಇಲಾಖೆಗಳಿಂದ ಕೈಗೊಂಡ ಯೋಜನೆಗಳ ಬಗ್ಗೆ ಇಲಾಖಾವಾರು ಚರ್ಚೆ ವಿವಿಧ ಯೋಜನೆಯಡಿ ಫಲಾನುಭವಿಗಳ ಆಯ್ಕೆ, ಕರವಸೂಲಿಗಳ ಬಗ್ಗೆ ಚರ್ಚೆ, ಸಾರ್ವಜನಿಕರ ಕುಂದುಕೊರತೆ ಹಾಗೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವ ಇತರೆ ವಿಷಯಗಳ ಚರ್ಚೆಗಳನ್ನು ಗ್ರಾಮಸಭೆಯಲ್ಲಿ ಕೈಗೊಳ್ಳಲಾಗುತ್ತದೆ.
ಗ್ರಾಮ ಸಭೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮ ಸಾರ್ವಜನಿಕರು ಭಾಗವಹಿಸಬೇಕೆಂದು ಕುಸುಗಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಆರ್.ಮಂಟೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.18 ರಂದು ಕುಸುಗಲ್ಲ ಗ್ರಾ.ಪಂ 2ನೇ ಸುತ್ತಿನ ಗ್ರಾಮಸಭೆ
