23 C
Karnataka
Saturday, March 21, 2026
spot_img

ಅಮೋದಿನಿಯ ಸುಶ್ರಾವ್ಯ ಕಂಠದಿಂದ ಹೊರಹೊಮ್ಮಿದ ಸಂಗೀತಕ್ಕೆ ಮನಸೋತ ಶ್ರೋತೃಗಳು…

ಹುಬ್ಬಳ್ಳಿ . 7 – ದಿ ನಗರಕರ ಲೈಬ್ರರಿ ಆರ್ಟಿಸ್ಟ್ ಫೋರಮ್ ವತಿಯಿಂದ ಪ್ರತಿ ತಿಂಗಳು ದಿ ನಗರಕರ ಲೈಬ್ರರಿಯ ಸಭಾಂಗಣದಲ್ಲಿ ನಡೆಯುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ದಿ.ಪಂಡಿತ ನಾಗನಾಥ ಒಡೆಯರ ಅವರ ಸ್ಮರಣಾರ್ಥ ಸ್ವರ ಶ್ರದ್ಧಾಂಜಲಿ ಹಾಗೂ145ನೇ ಕಾರ್ಯಕ್ರಮದ ಈ ತಿಂಗಳು 07-01-2024ರ ರವಿವಾರ ಹುಬ್ಬಳ್ಳಿಯ ಉದಯೋನ್ಮಖ ಗಾಯಕಿ ಅಮೋದಿನಿ ಮಹಾಲೆ ಅವರು ಮಧುವಂತಿ ರಾಗದಲ್ಲಿ ಬಢಾ ಖಯಾಲ ಹಾಗೂ ಅನೇಕ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಇವರೊಂದಿಗೆ ಅತ್ಯಂತ ಸಮರ್ಥವಾಗಿ ಕೃಷ್ಣಕುಮಾರ ಕುಲಕರ್ಣಿ ತಬಲಾ, ಚಿದಂಬರ ಜೋಶಿ ಹಾರ್ಮೋನಿಯಂ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ನಾರಾಯಣ ಮಾಯಾಚಾರಿ, ಪರುಶುರಾಮ ಭಜಂತ್ರಿ, ಪಂಡಿತ ಅಶೋಕ ನಾಡಿಗೇರ ಅವರ ಗಾಯನ ಕಾರ್ಯಕ್ರಮ ಕೂಡ ನಡೆಯಿತು, ಕಾರ್ಯಕ್ರಮದಲ್ಲಿ ಶ್ರೀಮತಿ ಶಶಿಕಲಾ. ನಾಗನಾಥ. ಒಡೆಯರ್, ನಾಗಪ್ರಸಾದ ಕುಂದಾಪುರ, ಡಾ.ನಾಗಲಿಂಗ ಮುರಗಿ, ಶ್ರೀಮತಿ ವೀಣಾ ಹಾನಗಲ್, ವಾಸುದೇವ ಕಾರೇಕರ, ಕೌಸ್ತುಭ ಸಂಶಿಕರ್ ಸೇರಿದಂತೆ ಅನೇಕ ಸಂಗೀತ ಪ್ರೇಮಿಗಳು ಉಪಸ್ಥಿತರಿದ್ದರು , ಎ.ಕೆ.ಕುಲಕರ್ಣಿ ನಿರೂಪಿಸಿ ಎಮ್. ಆರ್. ರಾಮನಗೌಡ್ರ ವಂದಿಸಿದರು.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!