24.9 C
Karnataka
Wednesday, February 5, 2025
spot_img

ಸಿರಿಧಾನ್ಯ ಜಾಗೃತಿಗೆ ಕೃಷಿ ಇಲಾಖೆಯಿಂದ ಅಭಿಯಾನ ಸ್ವರೂಪ ಮೆಚ್ಚುಗೆ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು, ಜನವರಿ 07 (ಕರ್ನಾಟಕ ವಾರ್ತೆ):


ಸಿರಿಧಾನ್ಯಗಳ ಉತ್ಪಾದನೆ, ಮೌಲ್ಯ ವರ್ಧನೆ, ರಫ್ತು ಮತ್ತು ಮಾರಾಟಕ್ಕೆ ಅಭಿಯಾನದ ಸ್ವರೂಪ ನೀಡುವಲ್ಲಿ ಕರ್ನಾಟಕ ರಾಜ್ಯವು ವಿಶ್ವದಲ್ಲೇ ಮುಂಚೂಣಿಯಲ್ಲಿದ್ದು ಇದಕ್ಕಾಗಿ ಕೃಷಿ ಸಚಿವರು ಹಾಗೂ ಇಲಾಖೆಯನ್ನು ಅಭಿನಂದಿಸುವುದಾಗಿ  ಉಪ ಮುಖ್ಯ ಮಂತ್ರಿ  ಡಿ.ಕೆ ಶಿವಕುಮಾರ್ ಹೇಳಿದರು.


ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಏರ್ಪಡಿಸಿದ್ದ ಸಾವಯವ ,ಸಿರಿಧಾನ್ಯ ಅಂತರಾಷ್ಟ್ರೀಯ  ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಆವರು ಮಾತನಾಡಿದರು.
ನಾವು ನಮ್ಮ ಮೂಲ ಬೇರುಗಳನ್ನು ಮರೆಯಬಾರದು. ಸಿರಿಧಾನ್ಯ ನಮ್ಮ ಪರಂಪರೆಯ ಆಹಾರವಾಗಿದ್ದು ಅದನ್ನು ಬೆಳೆಸಿ, ಬಳಸಬೇಕು ಎಂದರು.


ರಾಜ್ಯ ಸರ್ಕಾರ ಕೃಷಿ ಗೆ ಹೆಚ್ಚಿನ ಆಧ್ಯತೆ ನೀಡುತ್ತಿದೆ ಸಿರಿಧಾನ್ಯಗಳ ಜಾಗೃತಿಗೆ ವಿಶೇಷ ಕಾಳಜಿ ವಹಿಸಿದೆ. ಇμÉ್ಟೂಂದು ಉತ್ಕøಷ್ಟ ದರ್ಜೆಯಲ್ಲಿ ಅಚ್ಚುಕಟ್ಟಾಗಿ ಸಿರಿಧಾನ್ಯ ಮೇಳ ಆಯೋಜಿಸಿರುವುದು ಪ್ರಶಂಸನೀಯ ಎಂದರು.
ಕೇಂದ್ರ ಬುಡಕಟ್ಟು ವ್ಯವಹಾರ, ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಅರ್ಜುನ್ ಮುಂಡಾ ಅವರು ಮಾತನಾಡಿ, ಅತ್ಯಂತ  ಪೌಷ್ಟಿಕತೆ ಸಿರಿಧಾನ್ಯಗಳ ಉತ್ಪಾದನೆ, ಬಳಕೆ ಮೌಲ್ಯ ವರ್ಧನೆಗೆ, ಜಾಗೃತಿ, ಪ್ರಚಾರಕ್ಕೆ ಆಂದೋಲನದ ರೂಪ ನೀಡಿರುವ ಕರ್ನಾಟಕದ ಪ್ರಯತ್ನ ಶ್ಲಾಘನೀಯ ಎಂದರು.


ಕೇಂದ್ರ ಸರ್ಕಾರ ಕೂಡ ಸಿರಿಧಾನ್ಯವನ್ನು ಸಿರಿ ಅನ್ನದ ಎಂದು ಪ್ರಚಾರ ಪಡಿಸುತ್ತಿದೆ. 2023 ಅನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆ ಮೂಡಿಸುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ದೇಶದ ಹಲವು ರಾಜ್ಯಗಳಲ್ಲಿ  ಕೃಷಿಗೆ ನೀರಿನ ಕೊರತೆ ಇದೆ. ವಿಪರೀತ ರಾಸಾಯನಿಕ ಬಳಸಿ ಭೂಮಿಯ ಸತ್ವ ನಾಶವಾಗುತ್ತಿದೆ. ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬೆಳೆ ಇದಕ್ಕೆ ಪರಿಹಾರವಾಗಬಲ್ಲದು ಮತ್ತು ರೈತರಿಗೆ ಲಾಭದಾಯಕ ವಾಗಬೇಕಿದೆ ಎಂದರು.
ಕೇಂದ್ರ ಸರ್ಕಾರ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. ಇದಕ್ಕೆ ಧೃಡೀಕರಣ ನೀಡುವ ಕೆಲಸ ಕೂಡ ಮಾಡುತ್ತಿದೆ ರೈತರು ಇದರ ಅನುಕೂಲ ಪಡೆದುಕೊಳ್ಳಬೇಕು. ನಾವೆಲ್ಲರೂ ಜಾಗೃತರಾಗಬೇಕು. ಕೃಷಿ ನವೋದ್ಯಮ  ಮತ್ತು ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕು ಎಂದು ಕೇಂದ್ರ ಸಚಿವರಾದ ಅರ್ಜುನ್ ಮುಂಡಾ ಕರೆ ನೀಡಿದರು.


ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಬೆಂಗಳೂರು ಕೇವಲ ಐ.ಟಿ., ಬಿಟಿ ಹಬ್ ಆಗಿರದೆ ವಿಶ್ವದ  ಸಿರಿಧಾನ್ಯ ರಾಜಧಾನಿಯಾಗಿದೆ ಎಂದರು.


ಕರ್ನಾಟಕ ಸರ್ಕಾರ 2016ರಲ್ಲೇ ಸಿರಿಧಾನ್ಯಗಳ ಜಾಗೃತಿ ಆಂದೋಲನ ಪ್ರಾರಂಭಿಸಿತು ಅದರ ಫಲವಾಗಿಯೆ 2023 ನ್ನು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಎಂದು ಘೋಷಿಸಲಾಯಿತು. ಸಿರಿಧಾನ್ಯಕ್ಕೆ ರಾಜ್ಯ ನೀಡಿದ ಪ್ರೋತ್ಸಾಹದಿಂದ  ವಿಶ್ವದಲ್ಲಿ ಮಾರುಕಟ್ಟೆ ವೃದ್ದಿಯಾಗಿದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿದೆ ರೈತರೂ ಆರ್ಥಿಕ ಲಾಭ ಗಳಿಸುವಂತಾಗಿದೆ ಎಂದು ಕಂದಾಯ ಸಚಿವರು ಹೇಳಿದರು.


2024 ರ ಅಂತರಾಷ್ಟ್ರೀಯ ಮೇಳ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವುಯಾಗಿದ್ದು, ಇದಕ್ಕಾಗಿ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಹಾಗೂ  ಇಲಾಖೆ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ನಂತರ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, ರಾಜಧಾನಿ ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಸಾವಯವ, ಸಿರಿಧಾನ್ಯ  ಅಂತರಾಷ್ಟ್ರೀಯ ವಾಣಿಜ್ಯ ಮೇಳ ಅತ್ಯಂತ ಯಶಸ್ವಿಯಾಗಿ ಮುಕ್ತಾಯ ಗೊಂಡಿದೆ ಇದರ ಯಶಸ್ಸು ಸಮಸ್ತ ರೈತ ವರ್ಗ, ವರ್ತಕರು ಸಂಘಟಕರು ಹಾಗೂ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.


 ಜರ್ಮನಿ, ಕೀನ್ಯಾ, ಕುವೈತ್, ಯು.ಎ.ಇ. ಆಸ್ಟ್ರೇಲಿಯ, ಯುರೋಪಿಯನ್ ಒಕ್ಕೂಟ ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. 310 ಮಳಿಗೆಗಳನ್ನು ಹಾಕಲಾಗಿತ್ತು, 16 ರಾಜ್ಯಗಳ ವಸ್ತು ಪ್ರದರ್ಶನ ಹಾಗೂ ತಂಡಗಳು ಮೇಳದಲ್ಲಿ ಭಾಗವಹಿಸಿದ್ದವು ಎಂದು ಮಾಹಿತಿ ನೀಡಿದರು.


147 ಮಾರುಕಟ್ಟೆದಾರರು, ರಫ್ತುದಾರರು, 275 ಉತ್ಪ್ಪಾದಕರು/ಮಾರಾಟಗಾರರು ಬಿ2ಬಿ ಸಭೆಯಲ್ಲಿ ಪಾಲ್ಗೊಂಡಿದ್ದರು. 182 ಸಭೆಗಳು ನಡೆದಿದ್ದು 150 ಕೋಟಿ ರೂ. ಮೌಲ್ಯದ 27 ಒಪ್ಪಂದಗಳಾಗಿವೆ ಎಂದು ತಿಳಿಸಿದರು.
ಮೇಳದಲ್ಲಿ 07 ಅಂತರಾಷ್ಟ್ರೀಯ 59 ಹೊರ ರಾಜ್ಯಗಳ ಮತ್ತು 81 ರಾಜ್ಯದ ಮಾರುಕಟ್ಟೆದಾರರು ಭಾಗವಹಿಸಿದ್ದರು. ವಸ್ತು ಪ್ರದರ್ಶನದಿಂದ 20 ಕೋಟಿ ವಹಿವಾಟು  ನಡೆದಿದೆ. ದೇಶ ವಿದೇಶಗಳ 51 ಪ್ರಖ್ಯಾತ ವಿಷಯ ತಜ್ಞರು 8 ಅಧಿವೇಶನದಲ್ಲಿ ಉಪನ್ಯಾಸ ನೀಡಿದ್ದಾರೆ. 255 ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಕೃಷಿ  ಸಚಿವರು ತಿಳಿಸಿದರು.


ರಾಜ್ಯ ಸರ್ಕಾರದ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕೃಷಿ ನವೋದ್ಯಮ, ಹೈಟೆಕ್ ಕಟಾವು ಹಬ್ ಸ್ಥಾಪನೆಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಬರ ಪರಿಸ್ಥಿತಿ ರಾಜ್ಯವನ್ನು ಕಾಡುತ್ತಿದೆ. ಸರ್ಕಾರ ವಿವಿಧ ಗ್ಯಾರಂಟಿ ಯೋಜನೆಗಳ ಮೂಲಕ ಸಂಕಷ್ಟದಲ್ಲಿರುವ ರೈತರ ಕುಟುಂಬಕ್ಕೆ ನೆರವಾಗುತ್ತಿದ್ದು ಕೇಂದ್ರವೂ ಪರಿಹಾರದ ಹಣ ಒದಗಿಸಬೇಕು ಎಂದರು.


ಸಾವಯವ, ಸಿರಿಧಾನ್ಯ ಅಂತರಾಷ್ಟೀಯ ಮೇಳದ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನೂ ಕೃಷಿ ಸಚಿವರು ಅಭಿನಂದಿಸಿದರು.


ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಮಾತನಾಡಿ, ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರಿಯ ವಾಣಿಜ್ಯ ಮೇಳ-2024 ನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಮೇಳದಲ್ಲಿ 310 ಮಳಿಗೆಗಳನ್ನು ಒದಗಿಸಲಾಗಿದ್ದು, 100 ಮಳಿಗೆಗಳನ್ನು ಸಾವಯವ ಕೃಷಿ ಮಾಡುವ ಉದ್ಯಮಶೀಲದಾರರಿಗೆ ನೀಡಲಾಗಿತ್ತು. 190 ಬೇರೆ ಮಾರಾಟಗಾರರಿಗೆ ಹಾಗೂ 20 ಆಹಾರ ಮಳಿಗೆಗಳನ್ನು ಒದಗಿಸಲಾಗಿತ್ತು ಎಂದರು.


ಅಂತರರಾಷ್ಟ್ರೀಯ ಸಮ್ಮೇಳನವನ್ನು  GiZ, IIMR  ಸಂಸ್ಥೆಗಳ ಸಹಯೋಗದೊಂದಿಗೆ “Transformation into organic and agroecology –Based Agriculture in Karnataka” ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ವಿಚಾರ ವಿಮರ್ಶೆಯಡಿ 51 ಪ್ರಖ್ಯಾತ ವಿಷಯತಜ್ಞರು ಭಾಗವಹಿಸಿದ್ದರು. ಇದರಿಂದ 225 ಪ್ರತಿನಿಧಿಗಳು ಈ ಸಮ್ಮೇಳನದ ಸೌಲಭ್ಯ ಪಡೆದಿದ್ದಾರೆ. ಅಂತರಾಷ್ಟ್ರೀಯ ಮೇಳದಲ್ಲಿ ಸುಮಾರು 16 ರಾಜ್ಯಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
ರಾಜ್ಯದಲ್ಲಿ ಸಾವಯವ ಬೆಳೆಯುವ ಸುಮಾರು 60 ಸಾವಿರ ರೈತರಿಗೆ ಇನ್ನಷ್ಟು ಉತ್ತೇಜನ ನೀಡಿ ಧಾನ್ಯಗಳನ್ನು ಸಂಸ್ಕರಣೆ ಮಾಡಲು ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಳಿಗೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಲವು ಹೊಸ ಸಿರಿಧಾನ್ಯಗಳ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ಸಿರಿಧಾನ್ಯ ಕುರಿತ ಪುಸ್ತಕ  ಬಿಡುಗಡೆ ಮಾಡಲಾಯಿತು. ಏಳು ರೀತಿಯ ವಿವಿಧ ಬಗೆಯ ಪಾನೀಯ ತಯಾರಿಸುವ ರೆಟ್ರೋಸಿಪ್ ಮಾಲ್ಟ್ ವೆಂಡಿಂಗ್ ಮಿಷನ್‍ಗೆ ಚಾಲನೆ ನೀಡಲಾಯಿತು. 


ಶಾಸಕರಾದ ರವಿ ಗಣಿಗ, ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಕೃಷಿ  ಇಲಾಖೆ ಪ್ರಧಾನ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತರಾದ ವೈ.ಎಸ್.ಪಾಟೀಲ್, ನಿರ್ದೇಶಕರಾದ ಡಾ.ಜಿ.ಟಿ  ಪುತ್ರ, ಜಲಾನಯನ ಇಲಾಖೆ ಆಯುಕ್ತರಾದ ಗಿರೀಶ್, ನಿರ್ದೇಶಕರಾದ ಶ್ರೀನಿವಾಸ್, ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ಸೇರಿದಂತೆ ಇನ್ನಿತರ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!