ಬೆಂಗಳೂರು, ಜನವರಿ 05 (ಕರ್ನಾಟಕ ವಾರ್ತೆ):
ಮಾನ್ಯ ಸರ್ವೋಚ್ಛ ನ್ಯಾಯಲಯವು Kishan Chand Jain V/s Union of India & Ors (W.P.No:360/2021) ರಲ್ಲಿ ದಿನಾಂಕ: 09-10-2023ರ ರಂದು ನೀಡಿರುವ ನಿರ್ದೇಶನದನ್ವಯ ಕರ್ನಾಟಕ ಮಾಹಿತಿ ಆಯೋಗವು ದಿನಾಂಕ:28-12-2023 ರಿಂದ ಆನ್‍ಲೈನ್ ಮೂಲಕ ದ್ವಿತೀಯ ಮೇಲ್ಮನವಿ ಮತ್ತು ದೂರು ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರುತ್ತದೆ.
ಕರ್ನಾಟಕ ಮಾಹಿತಿ ಆಯೋಗಕ್ಕೆ ಮಾಹಿತಿ ಹಕ್ಕು ಅಧಿನಿಯಮ, 2005 ಕಲಂ 19(3) ರಡಿ ಸಲ್ಲಿಸುವ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ಮತ್ತು ಕಲಂ 18(1) ರಡಿ ಸಲ್ಲಿಸುವ ದೂರು ಅರ್ಜಿಗಳನ್ನು e-filing ವ್ಯವಸ್ಥೆಯಡಿ URL https://rtisecondappeal.karnataka.gov.in ಮೂಲಕ ಅಥವಾ ಕರ್ನಾಟಕ ಮಾಹಿತಿ ಆಯೋಗದ ಅಧಿಕೃತ ಜಾಲತಾಣ www.kic.gov.in. ರಲ್ಲಿನ e-filing ಲಿಂಕ್ ಮೂಲಕ ಸಾರ್ವಜನಿಕರು ದ್ವಿತೀಯ ಮೇಲ್ಮನವಿ ಮತ್ತು ದೂರು ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಈ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.