ಬೆಂಗಳೂರು, ಜನವರಿ 04 (ಕರ್ನಾಟಕ ವಾರ್ತೆ):
ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯೇತರ ಸಿವಿಲ್ ಸರ್ವೀಸ್ (Non-State Civil Service) ಹುದ್ದೆಗಳಲ್ಲಿನ ಅಧಿಕಾರಿಗಳನ್ನು ಭಾರತೀಯ ನಾಗರೀಕ ಸೇವಾ ವೃಂದಕ್ಕೆ ಭರ್ತಿ ಮಾಡಲು ಅಧಿಸೂಚನೆಯನ್ನು ದಿನಾಂಕ:07-09-2022ರಂದು ಹೊರಡಿಸಲಾಗಿದ್ದು, ಸರ್ವೋಚ್ಚ ದಿನಾಂಕ: 22-08-2023 ರಂದು ಎಸ್.ಎಲ್.ಪಿ. ಸಂಖ್ಯೆ : 4342/2023 ರಲ್ಲಿ ನೀಡಿರುವ ಆದೇಶದನ್ವಯ ಪರೀಕ್ಷೆಯನ್ನು ಜನವರಿ 28 ರಂದು ನಡೆಸಲು ವೇಳಾಪಟ್ಟಿಯನ್ನು ಆಯೋಗದ ವೆಬ್‍ಸೈಟ್‍ನಲ್ಲಿ http://kpsc.kar.nic.in /Time Table ಪ್ರಕಟಿಸಲಾಗಿರುತ್ತದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಕೆ.ಎಸ್.ಲತಾಕುಮಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.