Site icon MOODANA Web Edition

ವಿಶೇಷ ಚೇತನರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಡಿ: ಮಹಾಂತೇಶ ಕುರ್ತಕೋಟಿ

ಹುಬ್ಬಳ್ಳಿ (ಕರ್ನಾಟಕ ವಾರ್ತೆ)ಜ.03: ವಿಶೇಷಚೇತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಸೌಲಭ್ಯ ನೀಡಿದ್ದು, ಆ ಎಲ್ಲ ಸೌಲಭ್ಯಗಳನ್ನು ವಿಶೇಷ ಚೇತನರು ಪಡೆದುಕೊಳ್ಳಬೇಕು ಎಂದು ವಿವಿಧೋದ್ದೇಶ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ ಹೇಳಿದರು.
ತಾಲೂಕಿನ ಚನ್ನಾಪೂರ ಗ್ರಾಮ ಪಂಚಾಯತ ವತಿಯಿಂದ ಏರ್ಪಡಿಸಿದ್ದ ವಿಕಲಚೇತನರ ಗ್ರಾಮಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಕಲಚೇತನರಿಗೆ ಸರ್ಕಾರ ವೈದ್ಯಕೀಯ ಮಂಡಳಿಯಿಂದ ಯುಡಿಐಡಿ ಕಾರ್ಡ್, ಸಾರಿಗೆ ಇಲಾಖೆಯಿಂದ ಬಸ್ ಪಾಸ್, ಕಂದಾಯ ಇಲಾಖೆಯಿಂದ ಮಾಸಾಶನ ಹಾಗೂ ಶಿಷ್ಯ ವೇತನ, ಶುಲ್ಕ ಮರುಪಾವತಿ, ಪೆÇ್ರೀತ್ಸಾಹಧನ, ಆಧಾರ ಯೋಜನೆ, ತ್ರಿಚಕ್ರ ವಾಹನ, ಸಾಧನ ಸಲಕರಣೆ, ವಿವಾಹ ಪೆÇ್ರೀತ್ಸಾಹ ಧನ, ಶಿಶುಪಾಲನ ಭತ್ಯೆ, ಗ್ರಾಪಂಯ 5% ಅನುದಾನ ಬಳಕೆ ಹಾಗೂ ನರೇಗಾ ಯೋಜನೆಯಲ್ಲಿ ಉದ್ಯೋಗ ಬಗ್ಗೆ ವಿಕಲಚೇತರಿಗೆ ಮಾಹಿತಿ ನೀಡಿ, ಸೌಲಭ್ಯ ಪಡೆಯಲು ತಿಳಿಸಿದರು.
ಚನ್ನಾಪೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸುನಂದ ದರಣ್ಣವರ ಮಾತನಾಡಿ, ವಿಶೇಷ ಚೇತನರಿಗಾಗಿ ಸರ್ಕಾರ ಅನುದಾನ ಮೀಸಲಿಟ್ಟು ವಿಕಲಚೇತನರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಎಲ್ಲ ವಿಕಲಚೇತನರು ಸೌಲಭ್ಯಗಳ ಬಗ್ಗೆ ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಂದ ಮಾಹಿತಿ ಪಡೆದು ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾ.ಪಂ ಅಧ್ಯಕ್ಷೆ ಕವಿತಾ ಕರಮಡಿ, ಗ್ರಾ.ಪಂ ಉಪಾಧ್ಯಕ್ಷೆ ಮೆಹಬೂಬಿ ವಲ್ಲೇನವರ, ಗ್ರಾ.ಪಂ ಸದಸ್ಯರು, ಅಂಗವಿಕಲರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ದಾವಲಬಿ ಗುದಗಿ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿ ಇದ್ದರು.

Exit mobile version