ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ.3: ಕುಂದಗೋಳ ಉಪವಿಭಾಗದ ವ್ಯಾಪ್ತಿಗೆ ಬರುವ ಕುಂದಗೋಳ ಶಾಖೆಯ ಬಸಾಪೂರ ಫೀಡರ್‍ನ 11 ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ಜನೇವರಿ 8 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಯರಗುಪ್ಪಿ, ಮುಳ್ಳೊಳ್ಳಿ, ಚಿಕ್ಕನರ್ತಿ, ಹಿರೇನರ್ತಿ, ಬಸಾಪೂರ, ಬೆನಕನಹಳ್ಳಿ, ಚಾಕಲಬ್ಬಿ, ಕೊಂಕಣಕುರಹಟ್ಟಿ, ಅಲ್ಲಾಪುರ, ಕಡಪಟ್ಟಿ, ಗುಡೇನಕಟ್ಟಿ, ಯರಿನಾರಾಯಣಪುರ, ರೊಟ್ಟಿಗವಾಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜ.8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
