ರಾಮಕೃಷ್ಣ ವಿವೇಕಾನಂದ ಆಶ್ರಮ ಕಲ್ಯಾಣ ನಗರ ಹುಬ್ಬಳ್ಳಿ ಇಂದ ಕಲ್ಪತರು ದಿನಾಚರಣೆಯನ್ನು ದಿನಾಂಕ 01-01-2024ರ ಸೋಮವಾರ ಸಂಜೆ 5:00ಕ್ಕೆ ಆಶ್ರಮದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಂಜೆ 5:00 ಶ್ರೀವಿಷ್ಣು ಸಹಸ್ರನಾಮ ಪಾರಾಯಣ, 5:25ಕ್ಕೆ
ಶ್ರೀ ರಾಮಕೃಷ್ಣ ಅಷ್ಟೋತ್ತರ ಪುಷ್ಪಾರ್ಚನೆ, 5:45 ಕ್ಕೆ ಪರಮಪೂಜ್ಯ ಶ್ರೀ ಸ್ವಾಮಿ ತೇಜಸಾನಂದಜೀ ಮಹಾರಾಜ್ ಅವರು ಭಜನೆ ನಡೆಸಿಕೊಡಲಿದ್ದಾರೆ ಇವರೊಂದಿಗೆ ಡಾ.ನಾಗಲಿಂಗ ಮುರಗಿ ತಬಲಾ ಸಾಥ್ ನೀಡಲಿದ್ದಾರೆ 6:30ಕ್ಕೆ ಆರತಿ, 7:00ಕ್ಕೆ ಪರಮಪೂಜ್ಯ ಶ್ರೀ ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್ ಅವರಿಂದ ವಿಶೇಷ ಪ್ರವಚನ, 7:30ಕ್ಕೆ ಮಹಾಪ್ರಸಾದದ ವ್ಯವಸ್ಥೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ರಾಮಕೃಷ್ಣರ ಕೃಪೆಗೆ ಪಾತ್ರರಾಗಬೇಕೆಂದು ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ರಘುವೀರಾನಂದಜೀ ಮಹಾರಾಜ್ ಅವರು ತಿಳಿಸಿದ್ದಾರೆ.




