ಹುಬ್ಬಳ್ಳಿ.30- ನಗರದ ನ್ಯೂ ಇಂಡಿಯಾ ಅಶ್ಯೂರನ್ಸ್ ನ ಆಡಳಿತ ಅಧಿಕಾರಿ ಸುಧೀರ್ ತೋಟ್ರೆ ಅವರು ತಮ್ಮ 33 ವರ್ಷಗಳ ಸೇವೆಯಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಶುಕ್ರವಾರ ಹುಬ್ಬಳ್ಳಿಯ ವಿಭಾಗೀಯ ಕಛೇರಿಯಲ್ಲಿ ಸಸಿಯನ್ನು ಕೊಟ್ಟು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರೋ ಗ್ರೀನ್ ಪೆಡಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ, ನ್ಯೂ ಇಂಡಿಯಾ ಅಶ್ಯೂರನ್ಸ್ ನ ವಿಭಾಗೀಯ ವ್ಯವಸ್ಥಾಪಕ ಸುಧೀದ್ರ ಇಂಡಿಕರ, ಸೀಮಾ ತೋಟ್ರೆ, ಸಾನಿಯಾ, ಸಚಿನ್, ನೀರಜ್ ಕಾಳೆ, ವಾಸುದೇವ ಬಂಕಾಪುರ, ನವೀನ ಪೆದ್ದಪಲ್ಲಿ, ಫಯಾಜ್ ಮೆಣಸಿನಕಾಯಿ, ಪಲ್ಲವಿ, ವಿಷ್ಣು ಪೂಜಾರಿ, ಚೈತನ್ಯ ಮುಂತಾದವರು ಉಪಸ್ಥಿತರಿದ್ದರು.