Site icon MOODANA Web Edition

ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ಧಾರವಾಡ. 30 – ಡಾ.ಡಿ.ಜಿ.ಶೆಟ್ಟಿ ಏಜ್ಯುಕೇಷನಲ್ ಸೋಸೈಟಿಯ ಆರ್.ಎಸ್.ಶೆಟ್ಟಿ ಕಾಲೇಜ ಆಫ್ ಕಾಮರ್ಸ್ ಹಾಗೂ ರುಕ್ಮೀಣಿ ಶೆಟ್ಟಿ ಮೆಮೊರಿಯಲ್ ಸುಧಾಕರ ಶೆಟ್ಟಿ ಬಿಸಿಎ ಕಾಲೇಜ ಜ್ಞಾನದೇಗುಲ, ಕೆಎಮ್‍ಎಫ್ ಹತ್ತಿರ ಧಾರವಾಡದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಡಾ. ನಾಗರಾಜ ಗೌಡರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಇಂಗ್ಲೀಷ ಭಾಷೆ ಸಂವಹನ ಕೌಶಲ್ಯವನ್ನು ಬೆಳೆಸಿಕೊಂಡು, ಭಾಷೆಯ ಮೇಲೆ ಪ್ರಭುತ್ವ ಬೆಳೆಸಿಕೊಂಡಲ್ಲಿ ವೃತ್ತಿ ಜೀವನದಲ್ಲಿ ತುಂಬಾ ಸಹಾಯಕವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂವಹನ ಒಂದೇ ಅಲ್ಲದೇ ಶಿಸ್ತು, ಸಂಯಮ ಹಾಗೂ ನಿರಂತರ ಪ್ರಯತ್ನಶೀಲರಾಗಿರುವುದು ಅತಿ ಮುಖ್ಯವಾಗಿದೆ ಎಂದು ಹೇಳಿದರು
ಇನ್ನೊರ್ವ ಸಂಪನ್ಮೂಲ ವ್ಯಕ್ತಿಯಾಗಿ ಪ್ರೋ. ಶಿವಾನಂದರವರು ಮಾತನಾಡಿ ಯುವಕರು ಶಿಸ್ತನ್ನು ಅಳವಡಿಸಿಕೊಳ್ಳುವುದು ಹಾಗೂ ಮಹಾತ್ವಾಕಾಂಕ್ಷಿಯಾಗಿರುವುದು ಮುಖ್ಯವಾಗಿದೆ. ಉದ್ಯೋಗ ಸಂದರ್ಶನಗಳನ್ನು ಎದುರಿಸುವಲ್ಲಿ ಸಂವಹನ ಅತಿ ಮುಖ್ಯವಾಗಿದೆ. ಅದೇ ರೀತಿ ಧರಿಸುವ ಉಡುಪುಗಳು ಕೂಡ ಮಹತ್ವ ಪಡೆದಿರುತ್ತವೆ, ಸಮಯಪಾಲನೆ ಮಾಡುವುದು ಎಂದು ಮುಂತಾದ ಸಂದರ್ಶನ ಕೌಶಲ್ಯಗಳನ್ನು ತಿಳಿಸಿಕೊಟ್ಟರು.
ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ಜಿ.ಶೆಟ್ಟಿಯವರು ಸ್ವಾಗತಿಸಿದರು. ಡಾ.ಎಸ್.ಎಮ್ ಸಾಲಿಮಠರವರು ವಂದಿಸಿದರು. ಉಪನ್ಯಾಸಕರಾದ ರಶ್ಮಿ ಶೆಟ್ಟಿ, ಎಸ್.ಎನ್.ಗುಡಿ, ಶರಣೇಶ ವಾಲಿ, ಅನಿತಾ ಕೋರೆ, ವಿಜಯಲಕ್ಷ್ಮೀ ಬಡಿಗೇರ ಉಪಸ್ಥಿತರಿದ್ದರು.

Exit mobile version