30.2 C
Karnataka
Thursday, February 6, 2025
spot_img

ರಾಜ್ಯ ಮಟ್ಟದ 2023 ರಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳ ಆಯ್ಕೆಗಾಗಿ ಅರ್ಜಿ ಆಹ್ವಾನ

ಬೆಂಗಳೂರು, ಡಿಸೆಂಬರ್ 29 (ಕರ್ನಾಟಕ ವಾರ್ತೆ):

ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಗ್ರಂಥಸ್ವಾಮ್ಯ ವಿಭಾಗದಿಂದ 2023 ಸಾಲಿಗೆ, ಜನವರಿ 31, 2024ರ ಒಳಗಾಗಿ ಕಾಫಿರೈಟ್ ಮಾಡಿಸಿರುವ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳ ಆಯ್ಕೆಗಾಗಿ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸಲ್ಲಸಲು ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಆಸಕ್ತರು ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು ಹಾಗೂ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಸಾರ್ವಜನಿಕ ಓದುಗರಿಗೆ ಒದಗಿಸಲು ಅನುಕೂಲವಾಗುವಂತೆ ಸ್ವ-ಇಚ್ಛೆ/ ಆಸಕ್ತಿಯುಳ್ಳ ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳು ಪುಸ್ತಕವನ್ನು ಆಯ್ಕೆಗೆ ಸಲ್ಲಿಸುವಾಗ ತಮ್ಮ ಅನುಮತಿ ಪತ್ರದೊಂದಿಗೆ ಸದರಿ ಪುಸ್ತಕದ ಸಾಪ್ಟ್‍ಕಾಫಿಯನ್ನು ಸಿ.ಡಿ ರೂಪದಲ್ಲಿ ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯಗೋಪುರ, 4ನೇ ಮಹಡಿ, ಡಾ: ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ಫೆಬ್ರವರಿ 5 ಸಂಜೆ 5.30 ಗಂಟೆಯೊಳಗೆ ಸಲ್ಲಿಸುವುದು. ತದನಂತರ ಬಂದಯಾವುದೇ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ.

ನಿಗದಿತ ಅರ್ಜಿ ನಮೂನೆ ಮತ್ತು ನಿಬಂಧನೆಗಳ ಮಾಹಿತಿಗಾಗಿ ಇಲಾಖಾ ಅಂತರ್ಜಾಲ www.dpl.karnataka.gov.in ಹಾಗೂ ರಾಜ್ಯದ ಎಲ್ಲಾ ಜಿಲಾ / ನಗರ ಕೇಂದ್ರ ಗ್ರಂಥಾಲಯಗಳ ಉಪನಿರ್ದೇಶಕರು / ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿಗಳಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ: 080-22864990, 22867358 ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಎಸ್.ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!