Site icon MOODANA Web Edition

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ/ಉಪ ಚುನಾವಣೆ -2023ರ ಮತ ಎಣಿಕೆ ಡಿಸೆಂಬರ್ 30 ರಂದು

ಬೆಂಗಳೂರು, ಡಿಸೆಂಬರ್ 28 (ಕರ್ನಾಟಕ ವಾರ್ತೆ):

ರಾಜ್ಯ ಚುನಾವಣಾ ಆಯೋಗವು ಡಿಸೆಂಬರ್ 4 ರ ಆದೇಶದಲ್ಲಿ ಹೊಸದಾಗಿ ರಚನೆಯಾಗಿರುವ ಮತ್ತು ಅವಧಿ ಮುಕ್ತಾಯಗೊಂಡಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ಘೋಷಿಸಲಾಗಿತ್ತು. ಡಿಸೆಂಬರ್ 27 ರಂದು ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತದಾನ ನಡೆದು ಶಾಂತ ರೀತಿಯಿಂದ ಮುಕ್ತಾಯಗೊಂಡಿರುತ್ತದೆ.

ಸ್ಥಳೀಯ ಸಂಸ್ಥೆವಾರು ಮತದಾನದ ಅಂಕಿ- ಅಂಶಗಳನ್ನು ರಾಜ್ಯ ಚುನಾವಣಾ ಆಯೋಗದ ವೆಬ್‍ಸೈಟ್ www.karsec.gov.in ರಲ್ಲಿ ಪಕಟಿಸಲಾಗಿದೆ. ಅಯಾ ನಗರ ಸ್ಥಳೀಯ ಸಂಸ್ಥೆಯ ಕೇಂದ್ರಸ್ಥಾನದಲ್ಲಿ ಡಿಸೆಂಬರ್ 30 ರಂದು ಬೆಳಿಗ್ಗೆ 8.00 ಗಂಟೆಯಿಂದ ಮತಗಳ ಎಣಿಕೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version