ಹುಬ್ಬಳ್ಳಿ (ಕರ್ನಾಟಕವಾರ್ತೆ) ಡಿ.26: ಹುಬ್ಬಳ್ಳಿ ತಾಲೂಕ ವರೂರ ಗ್ರಾಮ ಪಂಚಾಯತ ಕಾರ್ಯಾಲಯದಿಂದ 2023-24ನೇ ಸಾಲಿನ ಎರಡನೇ ಸುತ್ತಿನ ವಾರ್ಡ ಸಭೆ ಮತ್ತು ಗ್ರಾಮ ಸಭೆಗಳನ್ನು ಆಯೋಜಿಸಲಾಗಿದೆ.
ವರೂರಿನ ವಾರ್ಡ-1 ರಲ್ಲಿ ಡಿಸೆಂಬರ್ 29 ಬೆಳಿಗ್ಗೆ 10.30 ಗಂಟೆಗೆ ಬಸವೇಶ್ವರ ದೇವಸ್ಥಾನ, ವರೂರಿನ ವಾರ್ಡ-2 ರಲ್ಲಿ ಡಿಸೆಂಬರ್ 29 ಮಧ್ಯಾಹ್ನ 12.30 ಗಂಟೆಗೆ ದುರ್ಗಮ್ಮನ ದೇವಸ್ಥಾನ, ಕಂಪ್ಲಿಕೊಪ್ಪದಲ್ಲಿ ಡಿಸೆಂಬರ್ 29 ಮಧ್ಯಾಹ್ನ 2.30 ಗಂಟೆಗೆ ಬಸವೇಶ್ವರ ದೇವಸ್ಥಾನದಲ್ಲಿ ಮತ್ತು ಡಿಸೆಂಬರ್ 30 ರಂದು ಬೆಳಿಗ್ಗೆ 11 ಗಂಟೆಗೆ ವರೂರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾಮಸಭೆಗಳು ಜರುಗುಲಿವೆ.
ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಹಾಗೂ ಮಹಿಳಾ/ಯುವಕ ಮಂಡಳ ಸರ್ವಸದಸ್ಯರು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿ ಯಶಸ್ವಿಗೋಲಿಸಬೇಕೆಂದು ವರೂರ ಗ್ರಾ.ಪಂ ಕಾರ್ಯದರ್ಶಿಗಳಾದ ಸಂಗಪ್ಪ ಅಮ್ಮಿನಬಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.