Site icon MOODANA Web Edition

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ – 2024 ರ ವೇಳಾಪಟ್ಟಿ

ಬೆಂಗಳೂರು, ಡಿಸೆಂಬರ್ 27 (ಕರ್ನಾಟಕ ವಾರ್ತೆ):

ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2024ರ ಪರಿಷ್ಕøತ ವೇಳಾಪಟ್ಟಿಯನ್ನು ಡಿಸೆಂಬರ್ 26 ರಂದು ಪ್ರಕಟಿಸಿದೆ.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಕೈಗೊಳ್ಳಲು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಪಟ್ಟಿಯ ಅಂತಿಮ ಪ್ರಕಟಣೆಯ ಮೊದಲು DSEs/PSEs ಗಳ ಎಲ್ಲಾ ಪ್ರಕರಣಗಳನ್ನು ವಿಲೇವಾರಿ ಮಾಡಲು ನಿಗದಿಪಡಿಸಿದ್ದ ದಿನಾಂಕವನ್ನು ವಿಸ್ತರಿಸಿದೆ.

ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಲ್ಲಿ ಅರ್ಹತಾ ದಿನಾಂಕವಾಗಿ 01-01-2024 ರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಪರಿಷ್ಕøತ ವೇಳಾಪಟ್ಟಿಯಲ್ಲಿ, ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿಗಾಗಿ ನಿಗಧಿಪಡಿಸಲಾದ ದಿನಾಂಕ 26-12-2023 ನ್ನು 12-01-2024 ಕ್ಕೆ ಪರಿಷ್ಕರಿಸಿದೆ.

ಆರೋಗ್ಯ ನಿಯತಾಂಕಗಳನ್ನು ಪರಿಶೀಲಿಸುವುದು ಮತ್ತು ಅಂತಿಮ ಪ್ರಕಟಣೆಗಾಗಿ ಆಯೋಗದ ಅನುಮತಿಯನ್ನು ಪಡೆಯುವುದು ಹಾಗೂ ಡೇಟಾಬೇಸ್ ಅನ್ನು ನವೀಕರಿಸುವುದು ಮತ್ತು ಪೂರಕಗಳ ಮುದ್ರಣಕ್ಕೆ ಸಂಬಂಧಿಸಿದಂತೆ ನಿಗದಿಪಡಿಸಲಾದ ದಿನಾಂಕವನ್ನು 01-01-2024 ರಿಂದ 17-01-2024 ಕ್ಕೆ ಪರಿಷ್ಕರಿಸಿದೆ. ಅಂತಿಮ ಪ್ರಕಟಣೆಗಾಗಿ ನಿಗದಿಪಡಿಸಲಾದ ದಿನಾಂಕವನ್ನು 05-01-2024 ರಿಂದ 22-01-2024 ಕ್ಕೆ ಪರಿಷ್ಕರಿಸಲಾಗಿದೆ ಎಂದು ಭಾರತ ಚುನಾವಣಾ ಆಯೋಗವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version