Site icon MOODANA Web Edition

ನೀರಿನ ಅದಾಲತ್

ಬೆಂಗಳೂರು, ಡಿಸೆಂಬರ್ 26 (ಕರ್ನಾಟಕ ವಾರ್ತೆ):  

ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ಆಗ್ನೇಯ -3, ಆಗ್ನೇಯ 6, ಪಶ್ಚಿಮ 1-3, ವಾಯುವ್ಯ -5, ಉತ್ತರ 2-3, ದಕ್ಷಿಣ 1-3, ನೈರುತ್ಯ – 3, ನೈರುತ್ಯ -6, ಮತ್ತು ಪೂರ್ವ 2-4, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಡಿಸೆಂಬರ್ 28 ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ.

ಅದಾಲತ್ ಸೇವಾ ಠಾಣೆಗಳಾದ ಅರಳೂರು, ದೊಡ್ಡ ಕಣ್ಣನಹಳ್ಳಿ, ಕಸವನಹಳ್ಳಿ, ಬಿ.ಟಿ.ಎಂ ಲೇಔಟ್, 1,2 ಮತ್ತು 3, ವೆಸ್ಟ್ ಆಫ್ ಕಾರ್ಡ್ ರಸ್ತೆ, 1 ಮತ್ತು 2, ಕಾಮಾಕ್ಷಿಪಾಳ್ಯ, ಕಮಲಾನಗರ, ಮಹಾಲಕ್ಷ್ಮೀ ಲೇಔಟ್, ಅಗ್ರಹಾರ ದಾಸರಹಳ್ಳಿ, ಶೆಟ್ಟಿಹಳ್ಳಿ, ಅಬ್ಬಿಗೆರೆ, ಚಿಕ್ಕಸಂದ್ರ, ಸಿಡೇದಹಳ್ಳಿ, ದೊಡ್ಡಬಿದರಕಲ್ಲು, ಜಿ.ಕೆ.ವಿ.ಕೆ, ಮಾನ್ಯತಾ ಟೆಕ್‍ಪಾರ್ಕ್, ಅಂಜನಾಪುರ, ಬ್ಯಾಂಕ್ ಆಫೀಸರ್ಸ್ ಲೇಔಟ್, ಗೊಟ್ಟಿಗೆರೆ, ಎಂ.ಎನ್, ಪಾರ್ಕ್, ಬಿ.ಟಿ.ಆರ್, ಮೌಂಟ್‍ಜಾಯ್, ನಾಗೇಂದ್ರಬ್ಲಾಕ್, ಗಿರಿನಗರ, ಅಂಗಧೀರನಹಳ್ಳಿ, ಹೆಮ್ಮಿಗೆಪುರ, ಬನಶಂಕರಿ 6ನೇ ಹಂತ, ಕೆ.ಆರ್. ಪುರಂ, ಬಸವನಪುರ, ದೇವಸಂದ್ರ, ರಾಮಮೂರ್ತಿ ನಗರ, ವಿಜಿನಾಪುರ, ದೂರವಾಣಿನಗರ ಇಲ್ಲಿ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‍ಆಫ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version