ಹುಬ್ಬಳ್ಳಿ (ಕರ್ನಾಟಕವಾರ್ತೆ) ಡಿ.27 : ದಿವಂಗತ ಬಿ. ಬಸವಲಿಂಗಪ್ಪನವರ ಪುಣ್ಯತಿಥಿಯ ಅಂಗವಾಗಿ ರಾಷ್ಟಪಿತ ಮಹಾತ್ಮ ಗಾಂಧಿಜೀ ಉದ್ಯಾನವನ (ಇಂದಿರಾಗಾಜಿನ ಮನೆ) ಹುಬ್ಬಳ್ಳಿ ಆವರಣದಲ್ಲಿರುವ ದಿವಂಗತ ಬಿ.ಬಸವಲಿಂಗಪ್ಪನವರ ಪ್ರತಿಮೆಗೆ ಡಿಸೆಂಬರ್ 27 ರಂದು ಬೆಳಿಗ್ಗೆ 10.30 ಗಂಟೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾ ಪೌರರಾದ ವೀಣಾ ಚೇತನ ಬರದ್ವಾಡ ಮಾಲಾರ್ಪಣೆ ಮಾಡಿದರು.
ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಪಾಲಿಕೆಯ ಉಪ ಮಹಾಪೌರರಾದ ಸತೀಶ ಸುರೇಂದ್ರ ಹಾನಗಲ್ ಹಾಗೂ ಸದಸ್ಯರು, ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ, ಹೆಚ್ಚುವರಿ ಆಯುಕ್ತರಾದ ಚಿದಾನಂದ ಗುರುಸ್ವಾಮಿ, ಮುಖ್ಯ ಲೆಕ್ಕಾಧಿಕಾರಿಗಳಾದ ವಿಶ್ವನಾಥ ಬಿ., ಸಹಾಯಕ ಆಯುಕ್ತರಾದ ಕಲ್ಲಪ್ಪ ಕಟಗಿ, ಅಭಿವೃದ್ದಿ ಅಧಿಕಾರಿಗಳಾದ ಆನಂದ ಕಾಂಬಳೆ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.