ಬೆಂಗಳೂರು, ಡಿಸೆಂಬರ್ 22 (ಕರ್ನಾಟಕ ವಾರ್ತೆ):
ಬೆಂಗಳೂರು ನಗರ ವಿಶ್ವವಿದ್ಯಾನಿಲದಲ್ಲಿ ನಿರ್ದಿಷ್ಟ ಕೌಶಲ್ಯಗಳ ಕೆಲಸಗಾರರು ಮತ್ತು ವೃತ್ತಿಪರರಿಗಾಗಿ ಜಪಾನೀಸ್ ಭಾಷೆಯ ಒಂದು ವರ್ಷದ ಯುಜಿ ಡಿಪ್ಲೋಮಾ ಕೋರ್ಸನ್ನು ಪ್ರಾರಂಭಿಸಲಾಗಿದೆ.
ಈ ಕೋರ್ಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ನಾವು ಭಾರತದಲ್ಲಿ ಜಪಾನ್ ಮತ್ತು ಜಪಾನೀಸ್ ಕಂಪನಿಗಳಿಗೆ ಉದ್ಯೋಗದÀ ಬೆಂಬಲವನ್ನು ಒದಗಿಸುತ್ತೇವೆ. ಸದರಿ ಕೋರ್ಸು ಜಪಾನೀಸ್ ವ್ಯವಹಾರಿಕ ಭಾಷೆ, ವ್ಯಾಪಾರ, ಜಪಾನೀಸ್ ಕೆಲಸದ ಸಂಸ್ಕøತಿ, ಜಪಾನೀಸ್ ಸಂಸ್ಕøತಿ, ಸಮಾಜ ಮತ್ತು ಇತಿಹಾಸದಂತಹ ಸಾಮಾನ್ಯ ವಿಷಯಗಳಲ್ಲಿ ಸಾಮಥ್ರ್ಯವನ್ನು ನೀಡುವÀ ಗುರಿಯನ್ನು ಹೊಂದಿದೆ. 30 ವಿದ್ಯಾರ್ಥಿಗಳಿಗೆ ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟವರಾಗಿರಬೇಕು. ಜೊತೆಗೆ ತಾಂತ್ರಿಕ ಕ್ಷೇತ್ರಗಳಲ್ಲಿ ಡಿಪ್ಲೋಮಾ/ಆರೋಗ್ಯರಕ್ಷಣೆ, ನರ್ಸಿಂಗ್ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳ ವೃತ್ತಿಪರರು ಅರ್ಜಿ ಸಲ್ಲಿಸಬಹುದು.
ಈ ಕೋರ್ಸು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮಾರ್ಗದರ್ಶನ ಮತ್ತು ಸಾಮಗ್ರಿಗಳಲ್ಲಿ ಭಾರತ ಸರ್ಕಾರ, ಜೆಒಸಿಇ ಸ್ಥಳೀಯ ಜಪಾನೀಸ್ ಶಿಕ್ಷಕರಿಗೆ ಜೆಐಸಿಎ ಸಂಸ್ಥೆ / ಇಲಾಖೆಗಳ ಬೆಂಬಲವನ್ನು ಹೊಂದಿದೆ.
ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 080-29572019, Centre for Global Languages, ಬೆಂಗಳೂರು ನಗರ ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.