ಧಾರವಾಡ (ಕ.ವಾ) ಡಿ.23:*
ದಿನಾಂಕ:21/12/2023 ರಂದು ಕೆಲವು ಟಿ.ವಿ. ದೃಶ್ಯ ಮಾಧ್ಯಮಗಳಲ್ಲಿ ಮತ್ತು ದಿನಾಂಕ:22/12/2023 ರಂದು ಕೆಲವು ದಿನಪ್ರತಿಕೆಗಳಲ್ಲಿ ಧೃವ ಎಂಬ ಮಗುವಿಗೆ ಲಸಿಕೆ ನೀಡಿದ ನಂತರ ಮಗುವಿನ ಸಾವು ಸಂಭವಿಸಿದೆ ಎಂದು ವರದಿಯಾಗಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯ ಅನುಸಾರ ಮಗುವಿಗೆ ದಿನಾಂಕ:21/12/2023 ರಂದು ಲಸಿಕೆಗಳನ್ನು ನೀಡಿಲಾಗಿದೆ. ಮತ್ತು ಇದೇ ಲಸಿಕೆಗಳನ್ನು ಅದೇ ದಿನದಂದು ಬೇರೆ ಮಕ್ಕಳಿಗೆ ಕೂಡ ನೀಡಲಾಗಿದೆ. ಆ ಎಲ್ಲ ಮಕ್ಕಳು ಆರೋಗ್ಯದಿಂದಿರುತ್ತಾರೆ.
ಆದರೆ ಮಾಧ್ಯಮದಲ್ಲಿ ಧೃವ ಎಂಬ ಮಗು ಲಸಿಕೆ ನೀಡಿದ ನಂತರ ಮರಣ ಹೊಂದಿರುವದಾಗಿ ಭಿತ್ತರಿಸಿದ್ದು, ಸಾರ್ವಜನಿಕರಿಗೆ ತಪ್ಪು ಮಾಹಿತಿ ಪ್ರಸಾರವಾಗಿ ಲಸಿಕಾಕರಣ ಕುರಿತು ತಪ್ಪು ಅಭಿಪ್ರಾಯ ಉಂಟಾಗಬಹುದು.
ಲಸಿಕೆಗಳನ್ನು ಮಕ್ಕಳನ್ನು ಮಾರಕ ರೋಗಗಳಿಂದ ರಕ್ಷಿಸಲು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ನೀಡಲಾಗುತ್ತದೆ. ಮಗುವಿನ ಮರಣದ ಕುರಿತಂತೆ ನಿಯಮಾನುಸಾರ ಸಮಿತಿಯಿಂದ ತನಿಖೆ ನಡೆಸಿ, ರಾಜ್ಯಮಟ್ಟಕ್ಕೆ ಸಲ್ಲಿಸಿ, ಅಲ್ಲಿಯೂ ನಿಯಮಾನುಸಾರ ಪರಿಶೀಲಿಸಿ ತದನಂತರ ಈ ಕುರಿತಂತೆ ಕಾರಣವನ್ನು ನಿರ್ಧರಿಸುತ್ತಾರೆ.
ಆದ ಕಾರಣ ಈ ಕುರಿತಂತೆ ನಿಖರ ಕಾರಣ ತಿಳಿಯದೇ ತಪ್ಪು ಮಾಹಿತಿಯನ್ನು ಮಾಧ್ಯಮಗಳು ಭಿತ್ತಿರಿಸದಿರಲು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.