31.7 C
Karnataka
Wednesday, February 5, 2025
spot_img

ರಾಜಕೀಯ ಚಟುವಟಿಕೆಗಳಲ್ಲಿ ದಿವ್ಯಾಂಗರಿಗೆ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಗೌರವ: ಭಾರತೀಯ ಚುನಾವಣಾ ಆಯೋಗದಿಂದ ವಿಶೇಷ ಮಾರ್ಗಸೂಚಿ

ಬೆಂಗಳೂರು, ಡಿಸೆಂಬರ್ 22 (ಕರ್ನಾಟಕ ವಾರ್ತೆ):

ಪ್ರಜಾಪ್ರಭುತ್ವದ ತಳಹದಿಯಾದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯವಿದ್ದು, ಅದರಂತೆ ದಿವ್ಯಾಂಗರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಸಮಾನವಾಗಿ ಭಾಗವಹಿಸುವಿಕೆಯನ್ನು ಭಾರತೀಯ ಚುನಾವಣಾ ಆಯೋಗವು ಪ್ರೋತ್ಸಾಹಿಸುತ್ತದೆ ಎಂದು ಭಾರತ ಚುನಾವಣಾ ಆಯೋಗ ತಿಳಿಸಿದೆ.
ಈ ಕುರಿತಂತೆ ವಿಶೇಷ ಪ್ರಕಟಣೆ ನೀಡಿರುವ ಆಯೋಗ ವಿಶೇಷ ಚೇತನ ಸಮುದಾಯದ ಬಗ್ಗೆ ರಾಜಕೀಯವಾಗಿ ಒಳಗೊಳ್ಳುವಿಕೆ ಮತ್ತು ಗೌರವವನ್ನು ಉತ್ತೇಜಿಸಲು, ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ಅವರ ಪ್ರತಿನಿಧಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.

ರಾಜಕೀಯ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾಲುದಾರರಾಗಿರುವುದರಿಂದ ದಿವ್ಯಾಂಗ ಮತದಾರರ ಕುರಿತು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಒಳಗೊಂಡ ಆದೇಶವನ್ನು ಹೊರಡಿಸಲಾಗಿದೆ.

ಈಗಾಗಲೇ ಆಯೋಗವು ವಿಶೇಷಚೇತನ ವ್ಯಕ್ತಿಗಳ ಬಗ್ಗೆ ರಾಜಕೀಯ ಭಾಷಣದಲ್ಲಿ ಅವಹೇಳನಕಾರಿ ಪದಗಳನ್ನು ಬಳಸುವ ಅಥವಾ ಆಕ್ಷೇಪಾರ್ಹ ಭಾಷೆ ಬಳಕೆಯ ಬಗ್ಗೆ ರಾಜಕೀಯ ಪಕ್ಷಗಳಿಗೆ ಆಯೋಗವು ಅರಿವು ಮೂಡಿಸುತ್ತಿದೆ.

ಯಾವುದೇ ರಾಜಕೀಯ ಪಕ್ಷಗಳ ಸದಸ್ಯರು ಅಥವಾ ಅವರ ಅಭ್ಯರ್ಥಿಗಳು ಭಾಷಣ, ಪ್ರಚಾರದಲ್ಲಿ ದಿವ್ಯಾಂಗರಿಗೆ ಧಕ್ಕೆ ತರುವಂತಹ ಭಾಷೆಯನ್ನು ಬಳಸುವಂತಿಲ್ಲ. ಉದಾಹರಣೆಗೆ ಮೂಕ(ಗುಂಗಾ), ರಿಟಾರ್ಡೆಡ್ (ಪಾಗಲ್, ಸಿರ್ಫಿರಾ), ಕುರುಡು (ಅಂಧ, ಕನಾ), ಕಿವುಡ (ಬೆಹ್ರಾ), ಕುಂಟ (ಲಂಗ್ಡಾ, ಲೂಲಾ, ಅಪಹಿಜ್) ಮುಂತಾದ ಪದಗಳ ಬಳಕೆ ಮಾಡುವಂತಿಲ್ಲ. ಅಂಗವಿಕಲರಿಗೆ ನ್ಯಾಯ ಮತ್ತು ಗೌರವವನ್ನು ನೀಡಬೇಕು ಎಂಬ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ಮಾರ್ಗಸೂಚಿ ಪ್ರಕಟಿಸಿದೆ.

ಮಾರ್ಗಸೂಚಿಗಳು:
ರಾಜಕೀಯ ಪಕ್ಷಗಳು ಮತ್ತು ಅವರ ಪ್ರತಿನಿಧಿಗಳು ತಮ್ಮ ಬರಹಗಳು, ಲೇಖನಗಳು ಸೇರಿದಂತೆ ಪ್ರಚಾರದ ಸಂದರ್ಭಗಳಲ್ಲಿ ಅಥವಾ ರಾಜಕೀಯ ಪ್ರಚಾರದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ, ಭಾಷಣದ ಸಮಯದಲ್ಲಿ ದಿವ್ಯಾಂಗರ ಅಂಗವೈಕಲ್ಯ ಅಥವಾ ಅಂಗವಿಕಲತೆಯನ್ನು ಆಡಿಕೊಳ್ಳುವ, ಅವಹೇಳನಕಾರಿ, ಅವಮಾನಕರ ಪದಗಳನ್ನು ಬಳಸಬಾರದು.

ರಾಜಕೀಯ ಪಕ್ಷಗಳು ಮತ್ತು ಪಕ್ಷದ ಪ್ರತಿನಿಧಿಗಳು ದಿವ್ಯಾಂಗರ ಅಂಗವಿಕಲತೆ,  ಭಾಷೆ, ಪರಿಭಾಷೆ, ಸಂದರ್ಭ, ಅಪಹಾಸ್ಯ, ಅವಹೇಳನಕಾರಿ ಉಲ್ಲೇಖಗಳು ಮತ್ತು ಅವರನ್ನು ಅವಮಾನಿಸುವ ಯಾವುದೇ ರೀತಿಯ ಬಳಕೆಯು 2016 ರ ದಿವ್ಯಾಂಗರ ಹಕ್ಕುಗಳ ಕಾಯಿದೆಯ ಸೆಕ್ಷನ್ 92ರಡಿ ನಿಬಂಧನೆಗಳಿಗೆ ಒಳಪಡುತ್ತಾರೆ.

ರಾಜಕೀಯ ಪಕ್ಷಗಳು ದಿವ್ಯಾಂಗರ ಕುರಿತು ತಮ್ಮ ಪಕ್ಷಗಳ ಮಟ್ಟದಲ್ಲಿ ಪರಿಶೀಲಿಸಿ ಅಂಗೀಕರಿಸಲ್ಪಟ್ಟ ನಂತರ ಭಾಷಣ ಅಥವಾ ವಿಷಯವನ್ನು ಪ್ರಚುರಪಡಿಸುವುದು ಉತ್ತಮ.
ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ದಿವ್ಯಾಂಗರ ಕುರಿತು ತರಬೇತಿ ಮಾಡ್ಯೂಲ್ ಅನ್ನು ಒದಗಿಸಬಹುದು ಮತ್ತು ಸಮರ್ಥ ಭಾಷೆಯ ಬಳಕೆಗೆ ಸಂಬಂಧಿಸಿದಂತೆ ದಿವ್ಯಾಂಗ ವ್ಯಕ್ತಿಗಳಿಂದ ದೂರುಗಳನ್ನು ಕೇಳಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು.

ಪಕ್ಷ ಮತ್ತು ಸಾರ್ವಜನಿಕರ ವರ್ತನೆಯ ತಡೆಗೋಡೆಯನ್ನು ತೊಡೆದುಹಾಕಲು ಮತ್ತು ಸಮಾನ ಅವಕಾಶಗಳನ್ನು ಒದಗಿಸಲು ರಾಜಕೀಯ ಪಕ್ಷಗಳು ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರಂತಹ ಹಂತಗಳಲ್ಲಿ ಹೆಚ್ಚಿನ ದಿವ್ಯಾಂಗರನ್ನು ಸೇರಿಸಿಕೊಳ್ಳ ಬಹುದಾಗಿದೆ.
ಮತದಾನ ಕೇಂದ್ರಗಳಲ್ಲಿ ವಿಶೇಷ ಸ್ಥಾನಮಾನ:

ದಿವ್ಯಾಂಗರು ತಮ್ಮ ಮತ ಚಲಾಯಿಸಲು ಮತದಾನ ಕೇಂದ್ರಗಳಲ್ಲಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಚುನಾವಣಾ ಆಯೋಗವು ಮಾರ್ಗದರ್ಶಿ ಸೂತ್ರಗಳು ಮತ್ತು ಸೌಲಭ್ಯಗಳನ್ನು ಕಾಲ-ಕಾಲಕ್ಕೆ ವಿಸ್ತರಿಸುತ್ತಿದೆ ಹಾಗೂ ಉತ್ತಮಗೊಳಿಸುತ್ತಿದೆ.
ನೆಲ ಮಹಡಿಯಲ್ಲಿ ಮತದಾನ ಕೇಂದ್ರದ ಸ್ಥಾಪನೆ, ಇವಿಎಂನ ಬ್ಯಾಲೆಟ್ ಯೂನಿಟ್‍ನಲ್ಲಿ ಬ್ರೈಲ್ ಚಿಹ್ನೆಗಳು, ಸರಿಯಾದ ಗ್ರೇಡಿಯಂಟ್‍ನೊಂದಿಗೆ ರ್ಯಾಂಪ್‍ಗಳ ನಿರ್ಮಾಣ, ದಿವ್ಯಾಂಗರಿಗಾಗಿ ಪ್ರತ್ಯೇಕ ಸರತಿ ಸಾಲುಗಳು (ಆದ್ಯತಾ ಪ್ರವೇಶ), ವೀಲ್‍ಚೇರ್‍ಗಳು, ಅವಶ್ಯಕತೆ ಇರುವ ದಿವ್ಯಾಂಗರ ಸಹಾಯಕ್ಕಾಗಿ ಜೊತೆಯಲ್ಲಿ ಒಡನಾಡಿಗೆ ಅನುಮತಿ ನೀಡುವುದು. ದಿವ್ಯಾಂಗರು  ಪ್ರವೇಶಿಸಬಹುದಾದ ವಿಶೇಷ ಶೌಚಾಲಯಗಳು ಸೇರಿದಂತೆ ಮತದಾನದ ಪ್ರಕ್ರಿಯೆಯನ್ನು ವಿವರಿಸುವ ಸಾಕಷ್ಟು ಫಲಕಗಳು ಇತ್ಯಾದಿ ಕ್ರಮಗಳನ್ನು ಕೈಗೊಂಡಿದೆ.
ಮತದಾರರು ಮತಗಟ್ಟೆಗೆ ಬರಲು ಮತ್ತು ಸುರಕ್ಷಿತ, ಆರಾಮದಾಯಕ ಮತ್ತು ಆಹ್ಲಾದಕರ ಮತದಾನದ ಅನುಭವವನ್ನು ಹೊಂದಲು ಮತದಾರರನ್ನು ಪ್ರೋತ್ಸಾಹಿಸುವ ಪ್ರಯತ್ನವಾಗಿದ್ದರೂ, ಆಯೋಗವು ಮನೆಯಲ್ಲೇ ಮತದಾನದ ಸೌಲಭ್ಯವನ್ನು ಪರಿಚಯಿಸಿದೆ. ಶೇ.40ರಷ್ಟು ಅಂಗವೈಕಲ್ಯ ಹೊಂದಿರುವ ವಿಶೇಷಚೇತನ ಮತದಾರರು ಈ ಸೌಲಭ್ಯವನ್ನು ಪಡೆಯಲು ಆಯ್ಕೆ ಮಾಡಬಹುದು. ಇತ್ತೀಚಿನ ಚುನಾವಣೆಗಳಲ್ಲಿ ಈ ಸೌಲಭ್ಯದ ಜನಪ್ರಿಯತೆ ಹೆಚ್ಚುತ್ತಿದ್ದು, ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!