ಬೆಂಗಳೂರು, ಡಿಸೆಂಬರ್ 22 (ಕರ್ನಾಟಕ ವಾರ್ತೆ):
ಬೆಂಗಳೂರಿನ ಶಾಂತಿನಗರದ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಅವರ ಕಚೇರಿಯಲ್ಲಿ ಡಿಸೆಂಬರ್ 21 ರಂದು ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಎ-05/ ಎನ್‍ಕೆ ಮುಂಗಡ ನೋಂದಣಿ ಶ್ರೇಣಿ ಪ್ರಾರಂಭಿಸಲು ಆಕರ್ಷಕ ನೋಂದಣಿ ಸಂಖ್ಯೆಗಳ ಸಾರ್ವಜನಿಕ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 52,10,000/- ರೂಪಾಯಿಗಳ ರಾಜಸ್ವ ಸಂಗ್ರಹಣೆಯಾಗಿದೆ.
ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 18 ನೋಂದಣಿ ಸಂಖ್ಯೆಗಳಿಂದ ಸರ್ಕಾರಕ್ಕೆ ರೂ.37,10,000/-ಗಳ ರಾಜಸ್ವ ಸಂಗ್ರಹಣೆಯಾಗಿದೆ. ಅವುಗಳ ಪೈಕಿ, ಪ್ರತಿ ನೋಂದಣಿ ಸಂಖ್ಯೆಗೆ ಅರ್ಜಿ ಶುಲ್ಕ ರೂ. 75,000/- ಸೇರಿದಂತೆ ಕೆಎ-05/ಎನ್‍ಕೆ-0001 ಸಂಖ್ಯೆಗೆ ರೂ.4,75,000/-, ಕೆಎ-05/ಎನ್‍ಕೆ-1111 ಸಂಖ್ಯೆಗೆ ರೂ.4,65,000/-, ಕೆಎ-05/ಎನ್‍ಕೆ-5555 ಸಂಖ್ಯೆಗೆ ರೂ.3,65,000/-, ಕೆಎ-05/ಎನ್‍ಕೆ-9999 ಸಂಖ್ಯೆಗೆ ರೂ.3,55,000/-, ಕೆಎ-05/ಎನ್‍ಕೆ-0009 ಸಂಖ್ಯೆಗೆ ರೂ.2,65,000/-, ಕೆಎ-05/ಎನ್‍ಕೆ-4545 ಸಂಖ್ಯೆಗೆ ರೂ.2,35,000/-, ಕೆಎ-05/ಎನ್‍ಕೆ-3456 ಸಂಖ್ಯೆಗೆ ರೂ.2,05,000/-, ಕೆಎ-05/ಎನ್‍ಕೆ-0007 ಸಂಖ್ಯೆಗೆ ರೂ.1,80,000/- ಮತ್ತು ಕೆಎ-05/ಎನ್‍ಕೆ-6666 ಸಂಖ್ಯೆಗೆ ರೂ.1,75,000/-ಗಳ ಬಿಡ್ ಮೊತ್ತಕ್ಕೆ ಹರಾಜು ಮಾಡಲಾಗಿದೆ. ಹಾಗೂ ಇತರೆ 20 ಸಂಖ್ಯೆಗಳಿಗೆ ತಲಾ ರೂ. 75,000/- ರಂತೆ ರೂ. 15,00,000/- ಗಳ ರಾಜಸ್ವ ಸಂಗ್ರಹಣೆಯಾಗಿದ್ದು, ಒಟ್ಟು 52,10,000/- ರೂಪಾಯಿಗಳ ರಾಜಸ್ವ ಸಂಗ್ರಹಣೆಯಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.