19 C
Karnataka
Thursday, February 6, 2025
spot_img

ಯುವಶಕ್ತಿಯೇ ರಾಷ್ಟ್ರದ ಶಕ್ತಿ – ಕೇಂದ್ರ ಸಚಿವ ಭಗವಂತ ಖೂಬ

ಬೆಂಗಳೂರು, ಡಿಸೆಂಬರ್ 01 (ಕರ್ನಾಟಕ ವಾರ್ತೆ) :
ಯುವಕರಿಗೆ ದೇಶದ ಸಂಸ್ಕøತಿ, ಪರಂಪರೆ, ಒಳ್ಳೆಯ ವಿಚಾರಗಳು ಕುರಿತ ಅರಿವನ್ನು ನೀಡಿದಾಗ ಅವರು ಸಮಾಜಕ್ಕೆ ಶಕ್ತಿಯಾಗುತ್ತಾರೆ. ಆ ಶಕ್ತಿಯೆ ರಾಷ್ಟ್ರದ ಶಕ್ತಿಯಾಗುತ್ತದೆ. ಆಗ ನಮ್ಮ ರಾಷ್ಟ್ರವು ವಿಶ್ವಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ  ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬ ಅವರು ತಿಳಿಸಿದರು ಎಂದರು.
ಇಂದು ಬೆಂಗಳೂರು ನಗರ ವಿಶ್ವವಿದ್ಯಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಸಂಘಟನೆ, ಕರ್ನಾಟಕ ರಾಜ್ಯ ಎನ್. ಎಸ್. ಎಸ್. ಕೋಶ, ಬೆಂಗಳೂರು ಸಿಟಿ ಯೂನಿವರ್ಸಿಟಿ ಇವರ ಸಹಯೋಗದಲ್ಲಿ ರಾಜ್ಯ ಯುವ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಯುವಕರಯನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡುಹೋಗುವುದು ರಾಷ್ಟ್ರದ ಕರ್ತವ್ಯವಾಗಿದ್ದು, ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿ. ಸಮಾಜ ಸೇವಕರು ಮತ್ತು ಸಮಾಜದ ಆದರ್ಶ ವ್ಯಕ್ತಿಗಳು ಯುವಕರಿಗೆ ಮಾರ್ಗದರ್ಶನ ನೀಡಬೇಕು.


 ಪಠ್ಯಪುಸ್ತಕಗಳ ಮೂಲಕ ದೇಶದ ಶೌರ್ಯ, ಇತಿಹಾಸ, ದೇಶಕ್ಕಾಗಿ ಮುಡುಪಾಗಿಟ್ಟ ಮಹಾತ್ಮರ ಬಗ್ಗೆ ಅರಿವನ್ನು ಯುವಕರಿಗೆ ಮೂಡಿಸಿದಾಗ ನಮ್ಮ ದೇಶವು ಒಳ್ಳೆಯ ದಾರಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ದೇಶದ ಹಿತಕ್ಕಾಗಿ ಇರುವ ಇತಿಹಾಸವನ್ನು ತಿಳಿಸಿಕೊಡಬೇಕು. ಇತಿಹಾಸದಲ್ಲಿ  ಮಹಾಪುರುಷರು ನೀಡಿರುವ ಕೊಡುಗೆಯಿಂದ ಯುವಕರ ಮನಸಿನಲ್ಲಿ ದೇಶದ ಬಗ್ಗೆ ಸಮರ್ಪಣಾ ಭಾವ, ದೇಶ ಪ್ರೇಮವು ಹೊರಹೊಮ್ಮುತ್ತದೆ.  


ದೇಶವು ಅಮೃತ ಕಾಲದಲ್ಲಿ ಮುನ್ನಡಿಯುತ್ತಿದ್ದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಯಿತು. ದೇಶದಲ್ಲಿ 140 ಕೋಟಿ ಜನರಲ್ಲಿ 96 ಕೋಟಿ ಜನ ಯುವಕರಿದ್ದಾರೆ. ನರೇಂದ್ರ ಮೋದಿಯವರ ಆಶಯದಂತೆ ಯುವ ಸಮೂಹವು ತಾವು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಪರಿಶ್ರಮದಿಂದ ಪ್ರಗತಿಯನ್ನು ಸಾಧಿಸಿದಾಗ ಮುಂಬರುವ 2047 ರೊಳಗೆ ಭಾರತ ವಿಶ್ವದಲ್ಲಿ ಅಭಿವೃದ್ದಿ ಹೊಂದಿದ ದೇಶದಲ್ಲಿ ಅಗ್ರ ಪಂಕ್ತಿಯಲ್ಲಿರುತ್ತದೆ. ಹತ್ತು ವರ್ಷದಿಂದ ಆರ್ಥಿಕ ವ್ಯವಸ್ಥೆ 3.2 ಟ್ರಿಲಿಯನ್‍ನಿಂದ 4 ಟ್ರಲಿಯನ್ ಆಗಿದೆ.  ಜಿಡಿಪಿ ಅಭಿವೃದ್ಧಿಯಾಗಿದೆ. 10 ನೇ ಸ್ಥಾನದಲ್ಲಿದ್ದ ಆರ್ಥಿಕ ವ್ಯವಸ್ಥೆಯು 5 ವರ್ಷದಲ್ಲಿ 5ನೇ ಸ್ಥಾನಕ್ಕೆ ಏರಿದೆ. ಮುಂಬರುವ ಎರಡು ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಜರ್ಮನಿ, ಜಪಾನ್‍ಅನ್ನು ಹಿಮ್ಮಟ್ಟಲಿದೆ ಎಂದರು.


ರಾಜ್ಯ ಯುವ ಉತ್ಸವವು ಸ್ಫರ್ಧೆಯಲ್ಲಿ ಗೆಲ್ಲಲು ಮಾತ್ರ ಸೀಮಿತವಾಗಬಾರದು. ಗೆದ್ದವರು  ಯುವಕರಿಗೆ ಪ್ರೇರಣೆ ನೀಡುವಂತಿರಬೇಕು. ನಾಗರೀಕರು ಸ್ವಾವಲಂಬನೆ, ಸ್ವಾಭಿಮಾನದಿಂದ ಜೀವನ ನಡೆಸಬೇಕು. ಸಮಾಜಕ್ಕೆ ಹಾಗೂ ಸರ್ಕಾರಕ್ಕೆ ಕೊಡುಗೆ ನೀಡುವಂತವರಾಗಬೇಕು. ಯುವಕರ ಉತ್ತಮ ಭವಿಷ್ಯ ನಿರ್ಮಾಣದ ಜೊತೆಗೆ ಸಮಾಜ ಹಾಗೂ ರಾಷ್ಟ್ರದ ಭವಿಷ್ಯವು ಅಡಗಿದೆ. 2047ರ ಸ್ವಾತಂತ್ರ್ಯದ  ಶತ   ವರ್ಷ ತುಂಬುವ ವೇಳೆಗೆ, ವೈಭವ ಭಾರತ ನೋಡಲು ಯುವಕರಾದ ನೀವು ಇರುತ್ತೀರಿ. ಅಭಿವೃದ್ಧಿಶೀಲ ಹೊಂದಿದ ವೈಭವ ಭಾರತ ಕಲ್ಪನೆಯ ಕನಸನ್ನು ನೀವು ಕಾಣಬೇಕು.  ಕನಸಿನ ಜೊತೆಗೆ ಕನಸನ್ನು ನನಸು ಮಾಡಲು ಯುವಕರಾದ ನೀವು ಪ್ರಯತ್ನ ಮಾಡಬೇಕು ಎಂದರು.


ಕಾರ್ಯಕ್ರಮದಲ್ಲಿ ಶಿವಾಜಿನಗರದ ಶಾಸಕ ರಿಜ್ವಾದ್ ಅರ್ಷದ್ ಅವರು ಮಾತನಾಡಿ ಭಾರತವು ನೂರಾರು ಭಾಷೆ, ಸಂಸ್ಕøತಿಯನ್ನು ಹೊಂದಿದ್ದು, ಸಾವಿರಾರು ವರ್ಷದ ಇತಿಹಾಸವಿದೆ. ಭಾಷೆ, ಸಂಸ್ಕøತಿಯನ್ನು  ನಾವು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು ಎಂದರು.


ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಎನ್. ಶಶಿಕುಮಾರ್ ಐ.ಪಿ.ಎಸ್ ಅವರು  ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಮಾತನಾಡಿದ ಅವರು ರಾಜ್ಯ ಯುವ ಉತ್ಸವ ಕಾರ್ಯಕ್ರಮಕ್ಕೆ ಯುವಕ, ಯುವತಿಯರು ಬಂದಿದ್ದು ರಾಜ್ಯದ ವಿವಿಧ ಆಚಾರ, ವಿಚಾರ, ಭಾಷೆ, ನಡೆನುಡಿಗಳ ಅಂಶವನ್ನು ಗ್ರಹಿಸಿ ವ್ಯಕ್ತಿತ್ವ ವಿಕಸವಾಗಲು ಮುಖ್ಯ ಪಾತ್ರ ವಹಿಸುತ್ತದೆ.   ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಫರ್ಧೆಯಲ್ಲಿ ಯುವಕರು ಪಾಲ್ಗೊಳ್ಳುವುದರಿಂದ, ಸಂವಹನ ಕೌಶಲ್ಯ ಹೆಚ್ಚಾಗುತ್ತದೆ. ಜೀವನದಲ್ಲಿ ಕಷ್ಟದ ಸಮಯ ಬಂದಾಗ ಎದುರಿಸುವ ಶಕ್ತಿ ಅವರಲ್ಲಿ ಮೂಡುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಬೆಂಗಳೂರು ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪಕುಲಪತಿ ಲಿಂಗರಾಜ್ ಗಾಂಧಿ ಅವರು ಮಾತನಾಡಿ ವೈವಿಧ್ಯತೆಯನ್ನು ಕಾಪಾಡಿಕೊಂಡು ಏಕತೆಯನ್ನು ಸಾಧಿಸಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ  ನೆಹರು ಯುವ ಕೇಂದ್ರ ಸಂಘನೆ, ದಕ್ಷಿಣ ರಾಜ್ಯಗಳು ಪ್ರಾದೇಶಿಕ ನಿರ್ದೇಶಕರಾದ ಎಂ.ಎನ್. ನಟರಾಜ್ ಅವರು ಸೇರಿದಂತೆ ಹಿರಿಯ ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!