16.3 C
Karnataka
Thursday, February 5, 2026
spot_img

ಕನಕದಾಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನಕದಾಸ ಜಯಂತಿ

ಹುಬ್ಬಳ್ಳಿ- 30. ಭಕ್ತಿ ವೈರಾಗ್ಯ ಭಜನೆಗಳಷ್ಟೆ ಅಲ್ಲದೇ ಕುಲಕುಲವೆಂದು ಹೊಡದಾಡದಿರಿ ಎಂದು ೧೬ ನೇ ಶತಮಾನದ ಸಾಮಾಜಿಕ ವ್ಯವಸ್ಥೆ ವಿರುದ್ಧ ಸಮರ ಸಾರಿದವರು ಭಕ್ತ ಕನಕದಾಸರು ಎಂದು ಪತ್ರಿಕೋದ್ಯಮ ವಿಭಾಗದ ಸಂಯೋಜಕ ಬೀರೇಶ ತಿರಕಪ್ಪನವರ ಹೇಳಿದರು.
  ನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯದ ಡಾ. ಬಿ.ಎಫ್ ದಂಡಿನ ಸಭಾಂಗಣದಲ್ಲಿ ಸಮೂಹ ಮಹಾವಿದ್ಯಾಲಯಗಳ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
  ಕನಕದಾಸರು ಒಬ್ಬ ಕೀರ್ತನಾಕಾರರು, ಕವಿಗಳು, ತತ್ವಜ್ಞಾನಿಗಳು, ಸಂತರು, ಸಮಾಜ ಸುಧಾರಕರು, ವಿಶ್ವಮಾನವರು ಅಷ್ಟೆ ಅಲ್ಲದೇ ಒಬ್ಬ ಮಹಾನ ದಾರ್ಶನಿಕರಾಗಿ ಇಂದು ಸಮಾಜದಲ್ಲಿ ಪ್ರತಿಯೊಬ್ಬರ ಮನೆ ಮನಗಳಲ್ಲಿ ಉಳಿದಿದ್ದು ಅಂತಹವರು ಹಾಕಿಕೊಟ್ಟ ಹಾದಿಯಲ್ಲಿ ಇಂದಿನ ಪೀಳಿಗೆ ನಡೆಯಬೇಕಾಗಿದೆ ಎಂದು ಹೇಳಿದರು. ಇವರು ವೈರಾಗ್ಯದಿಂದ ದಾಸರಾಗಿ ಹರಿಭಕ್ತರಾಗಿ ಜೀವನ ಸಾಗಿಸಿದವರು ಎಂದು ಹೇಳಿದರು.
  ಕಾರ್ಯಕ್ರಮದಲ್ಲಿ ಎಂ.ಇಡಿ ವಿಭಾಗದ ಸಂಯೋಜಕರಾದ ಡಾ. ಎಚ್ ವಿ ಬೆಳಗಲಿಯವರು ಮಾತನಾಡಿ, ಕನಕದಾಸರು ತಮ್ಮ ಬರವಣಿಗೆಯಿಂದಲೇ ಜನರಲ್ಲಿ ಸಾಮಾಜಿಕ ಬದಲಾವಣೆಗಳ ಅರಿವನ್ನು ಮೂಡಿಸಿದವರು ಎಂದು ಹೇಳಿದರು.
  ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕರಾದ ಕೆ.ಬಿ ಕುರಿಯವರು ಮಾತನಾಡುತ್ತ, ಬಸವಣ್ಣ ೧೨ ನೇ ಶತಮಾನದಲ್ಲಿನ ವಚನ ಸಾಹಿತ್ಯದ ಯುಗದ ಕವಿ, ಕನಕದಾಸರು ೧೬ ನೇ ಶತಮಾನದಲ್ಲಿ ದಾಸ ಸಾಹಿತ್ಯದ ಯುಗದ ಕವಿಯಾಗಿದ್ದರು ಎಂದು ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪಿ.ಯು ವಿಭಾಗದ ಪ್ರಾಚಾರ್ಯ ಹಾಗೂ ಕೆ.ಆರ್.ಎಂ.ಎಸ್.ನ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಅವರು ಮಾತನಾಡುತ್ತ, ಇಂದಿನ ಪೀಳಿಗೆ ಕನಕದಾಸರ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಮತ್ತು ಮುಂದಿನ ದಿನದಲ್ಲಿ ವೈಶಿಷ್ಟ್ಯಪೂರ್ಣವಾಗಿ ಜಯಂತಿಯನ್ನು ಆಚರಿಸಬೇಕು ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಬಿ.ಎ ವಿದ್ಯಾರ್ಥಿನಿ ರಕ್ಷಿತಾ ಚಂಡಕೆ ಕನಕದಾಸರ ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಅಶೋಕ ಗಡಾದ ಕನಕದಾಸರ ಕುರಿತು ಹನಿಗವನ ವಾಚಿಸಿದರು, ಉಪನ್ಯಾಸಕರುಗಳಾದ ಸುಮಾ ನಾಯಕ, ಚಂಪಾ ಕಲ್ಲೆದೇವರ ಮತ್ತು ತನುಶ್ರೀಯವರು ಕನಕದಾಸರ ಕೀರ್ತನೆಗಳನ್ನು ಹೇಳಿದರು.
  ಕಾರ್ಯಕ್ರಮದಲ್ಲಿ ಬಿ.ಇಡಿ ವಿಭಾಗದ ಪ್ರಾಚಾರ್ಯರಾದ ಶ್ರೀಮತಿ ಡಾ ಎನ್ ಡಿ ಶೇಖ್, ಪದವಿ ವಿಭಾಗದ ಪ್ರಾಚಾರ್ಯ ಬಿ.ಜಿ ಮಡ್ಲಿ, ಎಂ.ಕಾಮ್ ವಿಭಾಗದ ಸಂಯೋಜಕರಾದ ಜಯದೇವಿ ಚರಂತಿಮಠ, ಬಿ.ಎಸ್‌ಡಬ್ಲೂ ಪದವಿ ವಿಭಾಗದ ಪ್ರಾಚಾರ್ಯ ಮಹೇಶಗೌಡ ಗೌಡಪ್ಪಗೌಡ್ರ, ಬೋಧಕ-ಬೋಧಕೇತರ ಸಿಬ್ಬಂಧಿ ವರ್ಗದವರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
  ಕಾರ್ಯಕ್ರಮವನ್ನು ಡಾ. ರಾಜಕುಮಾರ ಪಾಟೀಲ ನಿರೂಪಿಸಿದರು, ಶ್ರೀ ಬಿ ಜಿ ಮಡ್ಲಿ ಸ್ವಾಗತಿಸಿರು, ಉಪನ್ಯಾಸಕಿ ಕವಿತಾ ಬೇಲೇರಿ ಪ್ರಾರ್ಥಿನೆ ಮಾಡಿದರು, ಮಹೇಶಗೌಡ ಗೌಡಪ್ಪಗೌಡ್ರ ವಂದಿಸಿದರು. 

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!