17.7 C
Karnataka
Friday, February 7, 2025
spot_img

ಬೆಳಗಾವಿ ಅಧಿವೇಶನದ ಕಾರ್ಯಕಲಾಪಗಳ ನೇರ ಪ್ರಸಾರ – ಔಟ್‍ಪುಟ್ ಲಿಂಕ್ ಮೂಲಕ ಮಾಧ್ಯಮಗಳಿಗೆ ಒದಗಿಸಲು ಕ್ರಮ

ಬೆಂಗಳೂರು, ನವೆಂಬರ್ 29 (ಕರ್ನಾಟಕ ವಾರ್ತೆ):

16ನೇ ವಿಧಾನಸಭೆಯ ಎರಡನೇ ಅಧಿವೇಶನವು ಡಿಸೆಂಬರ್ 4 ರಿಂದ 15 ರವರೆಗೆ  ಬೆಳಗಾವಿಯ ಸುವರ್ಣ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ನಡೆಯಲಿದ್ದು, ಅಧಿವೇಶನದ ಕಾರ್ಯ ಕಲಾಪಗಳನ್ನು ಚಿತ್ರೀಕರಿಸಿ, ನೇರ ಪ್ರಸಾರ ಮಾಡಲು ಹಾಗೂ ಚಿತ್ರೀಕರಿಸಿದ ದೃಶ್ಯಗಳನ್ನು (ಔಟ್‍ಪುಟ್) ಉಭಯ ಸದನಗಳ ಸಚಿವಾಲಯದ ಆಂತರಿಕ ದೂರದರ್ಶನ ಶಾಖೆ (ಸಿಸಿಟಿವಿ), ವೆಬ್‍ಕ್ಯಾಸ್ಟಿಂಗ್ ಮತ್ತು ಇತರೆ ಖಾಸಗಿ ಚಾನಲ್‍ಗಳಿಗೆ ಸ್ಯಾಟಲೈಟ್ ಮೂಲಕ ಸಂಪರ್ಕ ಒದಗಿಸುವ ಕಾರ್ಯವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರಿಗೆ ವಹಿಸಲಾಗಿರುತ್ತದೆ.


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಚಿತ್ರೀಕರಿಸಿದ ವಿಧಾನಸಭೆಯ ಕಾರ್ಯಕಲಾಪಗಳ ವಾಹಿನಿಯವರು https://youtube.com/@KarnatakaLASession ಲಿಂಕ್ ಮೂಲಕ ಪಡೆಯಬಹುದಾಗಿದೆ. ಮುದ್ರಣ ಮಾಧ್ಯಮದವರು ಸದನದ ಕಾರ್ಯಕಲಾಪಗಳ ಭಾವಚಿತ್ರಗಳನ್ನು ವಾರ್ತಾ ಇಲಾಖೆಯಿಂದ ಪಡೆಯಬಹುದಾಗಿದೆ.


ಸದನದ ಕಾರ್ಯಕಲಾಪಗಳನ್ನು ವರದಿ ಮಾಡುವ ವರದಿಗಾರರಿಗೆ ವಿಧಾನಸಭೆಯ ಸಭಾಂಗಣದ ಎರಡನೇ ಮಹಡಿಯಲ್ಲಿರುವ ಪತ್ರಕರ್ತರ ಗ್ಯಾಲರಿಗೆ ಪ್ರವೇಶಿಸಲು ಅವಕಾಶವಿರುತ್ತದೆ. ಆದರೆ, ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಾಮೆನ್ ಹಾಗೂ ಮುದ್ರಣ ಮಾಧ್ಯಮದ ಛಾಯಾಗ್ರಾಹಕರುಗಳಿಗೆ ವಿಧಾನಸಭೆಯ ಸಭಾಂಗಣದೊಳಗೆ / ಎರಡನೇ ಮಹಡಿಯ ಪತ್ರಕರ್ತರ ಗ್ಯಾಲರಿಗೆ ಪ್ರವೇಶಾವಕಾಶ ಇರುವುದಿಲ್ಲ.
ವರದಿಗಾರರು ಸದನದ ಒಳಗೆ ಮೊಬೈಲ್ ದೂರವಾಣಿ, ಟ್ಯಾಬ್ ಇತ್ಯಾದಿಗಳನ್ನು ಕೊಂಡೊಯ್ಯುವಂತಿಲ್ಲ. ಎಲ್ಲಾ ಮುದ್ರಣ ಮಾಧ್ಯಮದವರು ಮತ್ತು ಸುದ್ದಿವಾಹಿನಿಯವರು ಸಹಕರಿಸಬೇಕೆಂದು ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳಾದ ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!