ಹುಬ್ಬಳ್ಳಿ.27 – ರಾಮಕೃಷ್ಣ ವಿವೇಕಾನಂದ ಆಶ್ರಮ, ಹುಬ್ಬಳ್ಳಿ , ಕಲ್ಯಾಣಿ ಮಹಿಳಾ ಮಂಡಳಿ, ಶ್ರೀಸದ್ಗುರು ಚೆಸ್ಮಾರ್ಟ್ಜ್ ಮತ್ತು ಮ್ಯೂಸಿಕ್ ಅಕಾಡೆಮಿ ಹಾಗೂ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಧಾರವಾಡ
ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸ್ವಾಮಿ ರಘುವೀರಾನಂದಜೀ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿಯ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ದಿನಾಂಕ 01-12-2023 ರಿಂದ 03-12-2023 ರವರೆಗೆ 3 ದಿನಗಳ ಕಾಲ ಉಚಿತ ಸುಗಮ ಸಂಗೀತ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಧಾರವಾಡ ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದ, ಖ್ಯಾತ ಸಂಗೀತ ಸಂಯೋಜಕರಾದ ಪಂಡಿತ ಶ್ರೀಕಾಂತ ಕುಲಕರ್ಣಿ ಅವರು ತರಬೇತಿ ನೀಡಲಿದ್ದು, ಸಂಗೀತ ವಿದ್ಯಾರ್ಥಿಗಳು, ಆಸಕ್ತರು ಶಿಬಿರದ ಪ್ರಯೋಜನ ಪಡೆಯಬೇಕೆಂದು ಸಂಯೋಜಕ ಡಾ. ನಾಗಲಿಂಗ ಮುರಗಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗೆ 9448728330 ಸಂಪರ್ಕಿಸಬಹುದು.