Site icon MOODANA Web Edition

ಪಡಿತರ ಚೀಟಿ ರದ್ದು – ಆಹಾರ ಇಲಾಖೆಯಿಂದ ಸ್ಪಷ್ಟೀಕರಣ

ಬೆಂಗಳೂರು, ನವೆಂಬರ್ 27 (ಕರ್ನಾಟಕ ವಾರ್ತೆ):

ಪಡಿತರ ಚೀಟಿ ಸಂಖ್ಯೆ ಹೆಚ್ಚಿಸುವಂತಿಲ್ಲ ಹಳೆಯದು ರದ್ದಾದರಷ್ಟೇ ಹೊಸದು ಎಂಬುದರ ಶೀರ್ಷಿಕೆಯಡಿ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಸೃಷ್ಟೀಕರಣ ನೀಡಿದ್ದಾರೆ.

ಸರ್ಕಾರದ ಆದೇಶ ಸಂಖ್ಯೆ ಆನಾಸ 211 ಡಿಆರ್‍ಎ 2021 (ಇ-ಆಫೀಸ್) ಬೆಂಗಳೂರು ದಿನಾಂಕ: 29-09-2023 ರನ್ವಯ 2.96 ಲಕ್ಷ ಹೊಸ ಅದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿಗೆ ಆದೇಶಿಸಿರುತ್ತದೆ. ಈ ಆದೇಶದನ್ವಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾರ್ಚ್ 2023 ರ ಮಾಹೆಯವರೆಗೆ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಸಿದ್ದ ಅರ್ಜಿಗಳಲ್ಲಿ ಅರ್ಹ ಅರ್ಜಿಗಳಿಗೆ ಪಡಿತರ ಚೀಟಿ ನೀಡುವ ಕಾರ್ಯ ಪ್ರಗತಿಯಲ್ಲಿರುತ್ತದೆ.

ಏಕ ಸದಸ್ಯ ಪಡಿತರ ಚೀಟಿಗಳನ್ನು ಹೊರತು ಪಡಿಸಿ 6 ತಿಂಗಳಿನಿಂದ ನಿರಂತರವಾಗಿ ಪಡಿತರ ಪಡೆಯದೇ ಇರುವ ಪಡಿತರ ಚೀಟಿದಾರರನ್ನು ಗುರುತಿಸಿ ಅವರ ಮನೆಯ ಸ್ಥಳ ತನಿಖೆ ಮಾಡಿ, ಸ್ಥಳ ತನಿಖಾ ಸಮಯದಲ್ಲಿ 6 ತಿಂಗಳಿನಿಂದ ನಿರಂತರವಾಗಿ ಪಡಿತರ ಪಡೆಯದೇ ಇರುವ ಬಗ್ಗೆ, ಖಾತ್ರಿ ಪಡಿಸಿಕೊಂಡು ಅಂತಹ ಪಡಿತರ ಚೀಟಿಗಳನ್ನು ಅಮಾನತ್ತಿನಲ್ಲಿಡಿಸಲಾಗುವುದು. ಈ ರೀತಿ ಅಮಾನತ್ತು ಪÀಡಿಸಿದಂತಹ ಪಡಿತರ ಚೀಟಿದಾರರು ಆಹಾರ ಧಾನ್ಯ ಪಡೆಯಲು ಮುಂದೆ ಬಂದಲ್ಲಿ ಅಂತಹವರ ಬಯೋಮೆಟ್ರಿಕ್ ಪಡೆದು ಆಹಾರಧಾನ್ಯವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version