ಬೆಂಗಳೂರು, ನವೆಂಬರ್ 27 (ಕರ್ನಾಟಕ ವಾರ್ತೆ):
ಶ್ರೀ ಗುರುನಾನಕ್ ದೇವ್ ಅವರ ಜೀವನ ತತ್ವಶಾಸ್ತ್ರ, ಅವರ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳು, ಕರ್ತವ್ಯನಿμÉ್ಠ, ಮನುಕುಲದ ಮೇಲಿನ ಪ್ರೀತಿ, ಸದ್ಭಾವನೆ, ಸಾಮರಸ್ಯ ಮತ್ತು ದೇವರ ಮೇಲಿನ ನಂಬಿಕೆ ಇಡೀ ಭಾರತೀಯ ಸಂಸ್ಕøತಿಗೆ ಅಮೂಲ್ಯವಾದ ಸಂಪತ್ತಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಇಂದು ಹಲಸೂರಿನಲ್ಲಿರುವ ಶ್ರೀ ಗುರುಸಿಂಗ್ ಸಭಾಗೆ ಭೇಟಿ ನೀಡಿದ ರಾಜ್ಯಪಾಲರು, ಗುರುನಾನಕ್ ಅವರಿಗೆ ನಮನಗಳನ್ನು ಸಲ್ಲಿಸಿ ಮಾತನಾಡಿದ ಅವರು, ಸಿಖ್ ಧರ್ಮದ ಸ್ಥಾಪಕ ಮತ್ತು ಸಿಖ್ ಸಮುದಾಯದ ಮೊದಲ ಗುರು ನಾನಕ್ ದೇವ್ ಜಯಂತಿ ದಿನದಂದು ಅವರಿಗೆ ನಮನಗಳನ್ನು ಸಲ್ಲಿಸಿತ್ತೇನೆ ಹಾಗೂ ಸರ್ವರಿಗೂ ಪ್ರಕಾಶ್ ಪರ್ವ್‍ನ ಶುಭಾಶಯಗಳು, ಈ ಪ್ರಕಾಶ್ ಪರ್ವ್ ಪ್ರತಿಯೊಬ್ಬರ ಜೀವನದಲ್ಲಿ ಬೆಳಕನ್ನು ತುಂಬಲಿ ಎಂದು ಪ್ರಾರ್ಥಿಸುತ್ತೇನೆಂದರು.
ಈ ದಿನವು ಗುರುನಾನಕ್ ದೇವ್‍ಜಿಯವರ ನ್ಯಾಯಯುತ, ಅಂತರ್ಗತ ಮತ್ತು ಸಾಮರಸ್ಯದ ಸಮಾಜದ ಕನಸನ್ನು ನನಸಾಗಿಸಲು ಮತ್ತೊಮ್ಮೆ ನಮ್ಮನ್ನು ಅರ್ಪಿಸಿಕೊಳ್ಳುವ ದಿನವಾಗಿದೆ. ಶ್ರೀ ಗುರುನಾನಕ್ ದೇವ್ ಅವರು ತಮ್ಮ ಜೀವನದಲ್ಲಿ ಸಾಮಾಜಿಕ-ಆರ್ಥಿಕ, ಲೌಕಿಕ-ಅತೀತ ಮತ್ತು ಆಧ್ಯಾತ್ಮಿಕ ಪರಿಶುದ್ಧತೆಯ ಸಾರ್ವತ್ರಿಕ ಪ್ರಾಯೋಗಿಕ ಸಾಧನೆಯ ಮೂಲಕ ಸಮನ್ವಯ, ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ತತ್ವಶಾಸ್ತ್ರವನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಗುರು ನಾನಕ್ ದೇವ್‍ಜೀ ಅವರು “ನಾಮ್ ಜಪೆÇೀ, ಕಿರಾತ್ ಕರೋ, ವಂದ್ ಛಾಕೋ” ಎಂಬ ಸಂದೇಶವನ್ನು ನೀಡಿದರು, ಅಂದರೆ – ದೇವರ ನಾಮವನ್ನು ಜಪಿಸಿ, ಕಷ್ಟಪಟ್ಟು ದುಡಿಯಿರಿ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಸಂದೇಶ ನೀಡಿದರು. ಗುರುನಾನಕ್ ದೇವ್ ಅವರ ಆಲೋಚನೆಗಳು ಪ್ರಪಂಚದಾದ್ಯಂತ ಶಾಂತಿ, ಸಮಾನತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಧಾರ್ಮಿಕ ಪ್ರವಾಸದ ಸಮಯದಲ್ಲಿ, ಗುರು ಸಾಹಿಬ್ ಬೀದರ್‍ಗೆ ಬಂದು ಬೀದರ್‍ನಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿದರು, ಇದನ್ನು ಇಂದು ನಾವು ಗುರುದ್ವಾರ ಶ್ರೀ ಗುರುನಾನಕ್ ಜೀರಾ ಸಾಹಿಬ್ ಎಂದು ಕರೆಯುತ್ತೇವೆ. ಆ ಪುಣ್ಯ ಕ್ಷೇತ್ರಕ್ಕೆ ಹಲವು ಬಾರಿ ಭೇಟಿ ನೀಡಿ ಗುರುದ್ವಾರದಲ್ಲಿ ನಮನ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದು ಹೇಳಿದರು.
ಶ್ರೀ ಗುರುನಾನಕ್ ದೇವ್ ಅವರು ಮಾರ್ಗದರ್ಶನದಲ್ಲಿ ನಡೆದು, ಸಂತೋಷವಾಗಿರೋಣ, ಇತರರನ್ನು ಸಂತೋಷಪಡಿಸೋಣ, ಪ್ರಾರ್ಥಿಸೋಣ, ಸೇವೆ ಮಾಡಿ ಮತ್ತು ಧರ್ಮವನ್ನು ರಕ್ಷಿಸಲು ಶ್ರಮಿಸೋಣ ಎಂದು ಕರೆ ನೀಡಿದರು.
ಈ ವೇಳೆ ಶ್ರೀ ಗುರುಸಿಂಗ್ ಸಭಾದ ಅಧ್ಯಕ್ಷರಾದ ಜಸ್ಬೀರ್ ಸಿಂಗ್ ದೋಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.