ಬೆಂಗಳೂರು, ನವೆಂಬರ್ 24 (ಕರ್ನಾಟಕ ವಾರ್ತೆ):
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ರಿಸರ್ಚ್, ಕೋಲ್ಕತ್ತಾ, ಹಾಗೂ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ, ನವದೆಹಲಿರವರ ಸಹಯೋಗದೊಂದಿಗೆ ಜಿಕೆವಿಕೆ ಆವರಣದಲ್ಲಿ ಆಯೋಜಿಸಲಾಗಿದ್ದ “ಪರಿಸರ, ಅರಣ್ಯ ಮತ್ತು ಸುಸ್ಥಿರ ಕೃಷಿ” ಕುರಿತ ಆಂತರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ. ಸುರೇಶ ಅವರು ನೇರವೇರಿಸಿದರು.
ನಂತರ ಮಾತನಾಡಿದ ಅವರು, 1964ರ ದಶಕದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹಸಿರು ಕ್ರಾಂತಿಯ ಅಳವಡಿಕೆಯ ಸಲುವಾಗಿ ಸುಧಾರಿತ ಹೆಚ್ಚು ಇಳುವರಿ ಕೊಡುವ ತಳಿಗಳಿಗೆ, ಸಸ್ಯ ಸಂರಕ್ಷಣಾ ರಸಾಯನಿಕಗಳಿಗೆ ಒತ್ತು ನೀಡಲಾಯಿತು. ಆದರೆ, ಪರಿಸರದ ಮೇಲೆ ಅದರಲ್ಲೂ ಮಣ್ಣಿನ ಮೇಲೆ ಆಗುವ ದುಷ್ಪರಿಣಾಮಗಳನ್ನು ಕಡೆಗಣಿಸಲಾಯಿತು. ಇದರ ಪರಿಣಾಮವಾಗಿ ಇಂದು ಮಣ್ಣಿನ ಫಲವತ್ತತೆ ಕುಸಿಯುತ್ತಿರುವುದು ಕಳವಳಕಾರಿಯಾದ ಸಂಗತಿ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿದ್ದು, ಪರಿಸರ ಸ್ನೇಹಿ ಸಂಶೋಧನೆಗಳಿಗೆ ಒತ್ತು ನೀಡಬೇಕಾಗಿದೆ ಎಂದರು.
ಕೃಷಿ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರವಾಗಿರುವುದರಿಂದÀ ಯುವಜನತೆ ಕೃಷಿಯನ್ನು ಒಂದು ವಾಣಿಜ್ಯ ಉದ್ಯಮವಾಗಿ ಪರಿಗಣಿಸಿ ಆಧುನಿಕ ತಂತ್ರಜ್ಞಾನಗಳಾದ ಯಂತ್ರ ಮಾನವನ ಅಳವಡಿಕೆ, ಕೃತಕ ಬುದ್ಧಿಮತ್ತೆ, ನಿಖರ ಕೃಷಿ, ಸಂವೇದಕಗಳ ಅಳಡಿಕೆಯಿಂದ ಕೂಲಿ ಕಾರ್ಮಿಕರ ಕೊರತೆಯನ್ನು ಕಡಿಮೆಗೊಳಿಸಿ, ಶ್ರಮವನ್ನು ಕಡಿತಗೊಳಿಸಿ ಸಕಾಲದಲ್ಲಿ ಬೇಸಾಯ ಕ್ರಮಗಳನ್ನು ಕೈಗೊಂಡು, ಜೈವಿಕ ತಂತ್ರಜ್ಞಾನ, ಜೈವಿಕ ಇಂಜಿನಿಯರಿಂಗ್ ಹಾಗೂ ಡಿಜಿಟಲ್ ಕೃಷಿಗೆ ಒತ್ತು ನೀಡಿ ಪರಿಸರ ಸ್ನೇಹಿ ಕೃಷಿಯನ್ನು ಸ್ಪರ್ಧಾತ್ಮಕ ಜಗತ್ತಿನೆÀಡೆಗೆ ಕೊಂಡೊಯ್ಯುವುದು ಅವಶ್ಯಕವೆಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಉತ್ಪಾದಕತೆ ಹೆಚ್ಚಿದೆ, ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಉತ್ಪಾದಕತೆ ಕಡಿಮೆಯಿದ್ದು ವಿಸ್ತೀರ್ಣ ಹೆಚ್ಚಿದೆ. ಇದಕ್ಕೆ ಪ್ರಮುಖ ಕಾರಣ ಹವಾಮಾನ ವೈಪರೀತ್ಯ ಹಾಗೂ ತಾಂತ್ರಿಕತೆಗಳನ್ನು ಸಮರ್ಪಕÀ ರೀತಿಯಲ್ಲಿ ಆಳವಡಿಸಿಕೊಳ್ಳದಿರುವುದು. ಆದುದರಿಂದ, ಹವಾಮಾನ ವೈಪರೀತ್ಯವನ್ನು ಎದುರಿಸಬಹುದಾದ ಬೆಳೆ ತಳಿಗಳ ಅಭಿವೃದ್ದಿ, ಬೆಳೆ ಪದ್ಧತಿಗಳ ಅಳವಡಿಕೆ ಹಾಗೂ ಸಿರಿಧಾನ್ಯಗಳ ಉತ್ಪಾದನೆಗೆ ಬಗ್ಗೆ ಹೆಚ್ಚು ಸಂಶೋಧನೆಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ತನ್ಮಯೀರುದ್ರ, ಅಧ್ಯಕ್ಷರು, ಇಂಟನ್ರ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ರಿಸರ್ಚ್, ಕೋಲ್ಕತ್ತಾ ಡಾ: ಕೆ.ಸಿ. ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕರು, ಡಾ: ಬಸವೇಗೌಡ, ಕುಲಸಚಿವರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಹಾಗೂ ಕೃಷಿ ಸಂಶೋಧಕರು ಉಪಸ್ಥಿತರಿದ್ದರು.