Site icon MOODANA Web Edition

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ : ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22, 2022-23ರ ಜುಲೈ ಆವೃತ್ತಿಗಳಲ್ಲಿ ಪ್ರಥಮ/ದ್ವಿತೀಯ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು 2023-24ನೇ ಸಾಲಿನ ಜುಲೈ ಆವೃತ್ತಿಗೆ ದ್ವಿತೀಯ/ ತೃತೀಯ ಬಿ.ಎ.,/ಬಿ.ಕಾಂ., ಬಿ.ಎಸ್ಸಿ. (ಜನರಲ್, ಹೋಮ್ ಸೈನ್ಸ್, ಐಟಿ), ಬಿ.ಸಿ.ಎ., ಬಿ.ಬಿ.ಎ. ಹಾಗೂ 2021-22, 2022-23ರ ಅಂತಿಮ ಎಂ.ಎ.(ಎಂ.ಸಿ.ಜೆ)/ಎಂ.ಕಾಂ., ಎಂ.ಬಿ.ಎ., ಎಂ.ಎಸ್ಸಿ., ಕೋರ್ಸ್‍ಗಳಿಗೆ ಬೋಧನಾ ಶುಲ್ಕವನ್ನು ದಂಡ ಶುಲ್ಕವಿಲ್ಲದೇ ಪಾವತಿಸಲು ಡಿಸೆಂಬರ್ 15 ರವರೆಗೆ  ಅವಧಿ ವಿಸ್ತರಿಸಲಾಗಿದೆ.

ದ್ವಿತೀಯ/ತೃತೀಯ ಬಿ.ಎ.,/ಬಿ.ಕಾಂ., ಬಿ.ಎಸ್ಸಿ. (ಜನರಲ್, ಹೋಮ್ ಸೈನ್ಸ್, ಐಟಿ), ಬಿ.ಸಿ.ಎ., ಬಿ.ಬಿ.ಎ., ಹಾಗೂ ಅಂತಿಮ ಎಂ.ಎ./ ಎಂ.ಎ. (ಜೆ.ಎಂ.ಸಿ.)/ಎಂ.ಕಾಂ., ಎಂ.ಬಿ.ಎ., ಎಂ.ಎಸಿ.್ಸ. ಕೋರ್ಸುಗಳಿಗೆ 400 ರೂ. ದಂಡ ಶುಲ್ಕದೊಂದಿಗೆ  ಪಾವತಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ.

ವಿದ್ಯಾರ್ಥಿಗಳು ಆನ್‍ಲೈನ್ www.ksoumysuru.ac.in ಮೂಲಕ ತಾವೇ ಬೋಧನಾ ಶುಲ್ಕವನ್ನು ಪಾವತಿಸಿಕೊಂಡು, ಶುಲ್ಕ ಪಾವತಿಸಿದ ರಶೀದಿ ಮತ್ತು ಅರ್ಜಿಯನ್ನು 15 ದಿನಗಳ ಒಳಗಾಗಿ ಪ್ರವೇಶಾತಿ ಪಡೆದ ಪ್ರಾದೇಶಿಕ ಕೇಂದ್ರಕ್ಕೆ ಖುದ್ಧಾಗಿ ಭೇಟಿ ನೀಡಿ ಪ್ರವೇಶಾತಿ ಹಾಗೂ ಗುರುತಿನ ಚೀಟಿ ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು.

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‍ಸೈಟ್ www.ksoumysuru.ac.in  ಮತ್ತು ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-26, ಕಛೇರಿ ದೂರವಾಣಿ ಸಂಖ್ಯೆ: 080-26603664 ಹಾಗೂ 98449-65515 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರಾದ ದಿಲೀಪ. ಡಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version