30.2 C
Karnataka
Sunday, March 22, 2026
spot_img

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಕರಡು ಮತದಾರರ ಪಟ್ಟಿ -2023  ಪ್ರಕಟ

ಬೆಂಗಳೂರು, ನವೆಂಬರ್ 23 (ಕರ್ನಾಟಕ ವಾರ್ತೆ):
ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ.

ಮತದಾರರ ಪಟ್ಟಿಗಳು ಸಂಬಂಧಪಟ್ಟ ಮತದಾರರ ನೋಂದಣಿ ಅಧಿಕಾರಿಗಳು/ಪ್ರಾದೇಶಿಕ ಆಯುಕ್ತರು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು/ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ,  www.ceo.karnataka.gov.in    ವೆಬ್‍ಸೈಟ್ ಮತ್ತು ಸಂಬಂಧಪಟ್ಟ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ವೆಬ್‍ಸೈಟ್‍ಗಳಲ್ಲಿ ಲಭ್ಯವಿದೆ.

ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ತಾತ್ಕಾಲಿಕ ಮತ್ತು ಸಾಮಾನ್ಯ ಹುದ್ದೆಗಳಿಗೆ ರಾಜ್ಯ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 01-11-2023 ಅನ್ನು ಅರ್ಹತಾ ದಿನಾಂಕವಾಗಿ ಉಲ್ಲೇಖಿಸಿ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸುವ ವೇಳಾಪಟ್ಟಿಯನ್ನು ಭಾರತದ ಚುನಾವಣಾ ಆಯೋಗ ಪ್ರಕಟಿಸಿದೆ.

ನವೆಂಬರ್ 06 ರವರೆಗೆ ಅರ್ಜಿಗಳನ್ನು ಸಲ್ಲಿಸಿದ ಎಲ್ಲಾ ಅರ್ಜಿದಾರರು  www.ceo.karnataka.gov.in  ನಿಗದಿಪಡಿಸಿದ ಸಂಬಂಧಿತ ಪದವೀಧರ / ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಮತ್ತು ಹಕ್ಕುಗಳು ಹಾಗೂ ಆಕ್ಷೇಪಣೆಗಳು ಇದ್ದಲ್ಲಿ ಡಿಸೆಂಬರ್ 09 ರೊಳಗೆ ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಸಲ್ಲಿಸಬಹುದು.

ಅರ್ಹ ಶಿಕ್ಷಕರು ಮತ್ತು ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಮೂನೆ 18 ಮತ್ತು 19 ರಲ್ಲಿ ಡಿಸೆಂಬರ್ 09 ರೊಳಗೆ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಜಾಲತಾಣ  www.ceo.karnataka.gov.in  ವೀಕ್ಷಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!