ಹುಬ್ಬಳ್ಳಿ (ಕರ್ನಾಟಕವಾರ್ತೆ) ನ.22: ತಾಲೂಕಿನ ಸುಳ್ಳ ಗ್ರಾಮದಲ್ಲಿ ತಾಲೂಕ ಪಂಚಾಯಿತಿ ಹುಬ್ಬಳ್ಳಿ ಗ್ರಾಮ ಪಂಚಾಯಿತಿ ಸುಳ್ಳ ಇವರ ಸಹಯೋಗದಲ್ಲಿ ವಿಕಲಚೇತನರ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶಾಂತವ್ವ ಕುಂಬಾರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವನಜಾಕ್ಷಿ ಹೊಸೂರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮಾ ಡೊಳ್ಳಿ, ಪ್ರಾಥಮಿಕ ಸುರಕ್ಷಿತ ಅಧಿಕಾರಿ ಎಸ್ ಜೈಶ್ರೀ, ಎಚ್‍ಪಿಟಿ ಹುಬ್ಬಳ್ಳಿ ತಾಲೂಕಿನ ಸಂಯೋಜಕಿ ದ್ರಾಕ್ಷಾಯಿಣಿ ಹಂಪಣ್ಣವರ, ವಿಆರ್‍ಡಬ್ಲ್ಯೂ ರೇಣುಕಾ ಕುಂದುಗೋಳ, ಆಶಾ ಕಾರ್ಯಕರ್ತೆರು, ಅಂಗನವಾಡಿ ಕಾರ್ಯಕರ್ತೆರು, ಪಂಚಾಯತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.