ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.21: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿವಿಧ ಆಸ್ಪತ್ರೆಗಳಲ್ಲಿ ಅವಶ್ಯಕತೆಗನುಗುಣವಾಗಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ವೈದ್ಯರು, ಎಮ್.ಬಿ.ಬಿ.ಎಸ್. ವೈದ್ಯರು ಹಾಗೂ ಸಾಮಾನ್ಯ ವೈದ್ಯರು, ಅರವಳಿಕೆ ತಜ್ಞರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ, ಎಲ್.ಡಿ.ಸಿ., ಡೇಸ್ಟರ್, ವಾರ್ಡಬಾಯ್, ಆಯಾ ಮತ್ತು ಅಂಬ್ಯೂಲೆನ್ಸ್ ವಾಹನ ಚಾಲಕರುಗಳ ಹುದ್ದೆಗೆ ಮಾಸಿಕ ಗೌರವಧನ ಆಧಾರದ ಮೇಲೆ ಹನ್ನೊಂದು ತಿಂಗಳ ಅವಧಿಗೆ ಸೇವೆಯನ್ನು ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ನೇರ ಸಂದರ್ಶನಕ್ಕೆ ನಿಗಧಿಪಡಿಸಿದ ಅವಧಿಯನ್ನು ಮುಂದೂಡಲಾಗಿದೆ.
ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಹುದ್ದೆಗೆ ನವೆಂಬರ್ 22 ರಂದು ನೇರ ಸಂದರ್ಶನಕ್ಕೆ ನಿಗಧಿಪಡಿಸಲಾಗಿದ್ದ ಅವಧಿಯನ್ನು ನವೆಂಬರ್ 27 ಕ್ಕೆ ಹಾಗೂ ಎಲ್.ಡಿ.ಸಿ., ಡೇಸ್ಸರ್, ವಾರ್ಡಬಾಯ್, ಆಯಾ ಮತ್ತು ಅಂಬ್ಯೂಲೆನ್ಸ್ ವಾಹನ ಚಾಲಕರ ಹುದ್ದೆಗೆ ನವೆಂಬರ್ 23 ರಂದು ನಿಗಧಿಪಡಿಸಲಾಗಿದ್ದ ನೇರ ಸಂದರ್ಶನ ಅವಧಿಯನ್ನು ನವೆಂಬರ್ 28 ಕ್ಕೆ ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿಗೆ www.hdmc.mrc.gov.in ವೆಬ್‍ಸೈಟ್‍ನಲ್ಲಿ ಪಡೆದುಕೊಳ್ಳಬಹುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.27 ಮತ್ತು 28 ಕ್ಕೆ ವೈದ್ಯಕೀಯ ಸಿಬ್ಬಂದಿಗಳ ನೇರ ಸಂದರ್ಶನ ಮುಂದೂಡಿಕೆ
![](https://news.ananddesigns.in/wp-content/uploads/2023/11/shutterstock_1676593111-1024x535.jpg)