Site icon MOODANA Web Edition

ಇ-ಪ್ರೊಕ್ಯೂರ್ ಮೆಂಟ್ ಮೂಲಕ ಅಲ್ಪಾವಧಿ ಇ-ಟೆಂಡರ್

ಬೆಂಗಳೂರು, ನವೆಂಬರ್ 21 (ಕರ್ನಾಟಕ ವಾರ್ತೆ) :

ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ಕಾರ್ಯಗಳಿಗೆ ಅಗತ್ಯವಿರುವ ಲೋಹದ ಕವಚ ಹೊಂದಿರುವ (ಕ್ಲೋಸ್ಡ್ ಕಂಟೇನರ್) ಭಾರಿ ವಾಹನಗಳ ಸೇವೆಯನ್ನು ಒಂದು ವರ್ಷದ ಅವಧಿಗೆ ಪಡೆಯಲು ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ.
ಆಸಕ್ತ ಬಿಡ್‍ದಾರರು https://kppp.karnataka.gov.in ಪೋರ್ಟಲ್ ಮೂಲಕ ಟೆಂಡರ್ ದಾಖಲೆಗಳನ್ನು ಪಡೆಯಬಹುದು. ಟೆಂಡರ್ ಸಲ್ಲಿಸಲು ಡಿಸೆಂಬರ್ 6 ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಆಯೋಗದ ದೂರವಾಣಿ ಸಂಖ್ಯೆ: 080-30565802ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸಹಾಯಕ ಕಾರ್ಯದರ್ಶಿ(ಪ್ರ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version