ಬೆಂಗಳೂರು, ನವೆಂಬರ್ 20 (ಕರ್ನಾಟಕ ವಾರ್ತೆ) :
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶನಲಯದ ವತಿಯಿಂದ ಪ್ರತಿ ವರ್ಷದಂತೆ ನಮ್ಮ ರಾಜ್ಯದಲ್ಲಿ ಸಶ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಬೆಂಗಳೂರಿನಲ್ಲಿ ಮತ್ತು ಇಲಾಖೆಯ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ. ಡಿಸೆಂಬರ್ 07 ರಂದು ಬೆಂಗಳೂರಿನ ರಾಜಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಭವ್ಯ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು, ಸೈನ್ಯದ ವರಿಷ್ಠ ನಿವೃತ್ತ ಅಧಿಕಾರಿಗಳು, ಉಚ್ಚ ಮಟ್ಟದ ನಾಗರೀಕ ಸೇವೆಗಳು ಹಾಗೂ ಸೈನ್ಯದ ಅಧಿಕಾರಿಗಳು ಭಾಗವಹಿಸಲಿರುವರು.
ಕರ್ನಾಟಕ ರಾಜ್ಯ ಸೈನಿಕ ಮಂಡಳಿಯ ಅಧ್ಯಕ್ಷರಾದ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷತೆ ವಹಿಸಲಿರುವರು. ಘನತೆವೆತ್ತ ರಾಜ್ಯಪಾಲರು ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಶಸ್ತ್ರ ಪಡೆಗಳ ಧ್ವಜಗಳನ್ನು ಬಿಡುಗಡೆ ಮಾಡಲಿರುವರು.
ಸಶಸ್ತ್ರ ಪಡೆಗಳ ಮತ್ತು ಯುದ್ದ ಹಾಗೂ ಯುದ್ದದಂತಹ ಕಾರ್ಯಾಚರಣೆಯಲ್ಲಿ ಮರಣ ಹೊಂದಿದ ಮತ್ತು ಗಾಯಗೊಂಡ ಸೈನಿಕರ ಕುಟುಂಬಗಳ ಕಲ್ಯಾಣಭಿವೃದ್ಧಿಯ ಬಗ್ಗೆ ಇಲಾಖೆ ಕೈಗೊಳ್ಳುತ್ತಿರುವ ಸರ್ಕಾರದ ಮತ್ತು ಇಲಾಖೆಯ ಕಾರ್ಯಗಳನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಮುಖ ಉದ್ದೇಶ ಸೈನಿಕ ಕಲ್ಯಾಣ ಮತ್ತು ಪುರ್ವಸತಿ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ಬೆಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರಾದ ಬ್ರಿಗೇಡಿಯರ್ ಎಮ್ ಬಿ ಸಶಿಧರ್ (ನಿವೃತ್ತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.