ಹುಬ್ಬಳ್ಳಿ (ಕರ್ನಾಟಕವಾರ್ತೆ) ನ.20: ಹೆಸ್ಕಾಂನ 110 ಕೆವ್ಹಿಅಣ್ಣಿಗೇರಿ ವಿದ್ಯುತ್ ಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಕೈಗೂಳ್ಳುವುದರಿಂದ ನವೆಂಬರ್ 22 ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ವರೆಗೆ 11ಕೆವ್ಹಿ ಮಾರ್ಗದ ನಲವಡಿ, ಬದ್ರಾಪುರ, ಕೋಳಿವಾಡ, ಅಣ್ಣಿಗೇರಿ, ಹಳ್ಳಿಕೇರಿ, ಮಜ್ಜಿಗುಡ್ಡ, ಕೊಂಡಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.