Site icon MOODANA Web Edition

ನ.22 ರಂದು ವಿದ್ಯುತ್ ವ್ಯತ್ಯಯ

ಹುಬ್ಬಳ್ಳಿ (ಕರ್ನಾಟಕವಾರ್ತೆ) ನ.20: ಹೆಸ್ಕಾಂನ 110 ಕೆವ್ಹಿ ರಾಮನಕೊಪ್ಪ ವಿದ್ಯುತ್ ಉಪ-ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಕೈಗೂಳ್ಳುವುದರಿಂದ ನವೆಂಬರ್ 22 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ 110 ಕೆವ್ಹಿ ಮಾರ್ಗದ ಇಂಡಸ್ಟ್ರೀಯಲ್, ಚಬ್ಬಿ, ಪಾಲಿಕೊಪ್ಪ, ಅರಳಿಕಟ್ಟೆ, ದ್ಯಾಮಾಪುರ, ವರೂರ, ಮುತ್ತಳ್ಳಿ, ತಡಸ, ಇನಾಮ ವೀರಾಪೂರ, ಮಳಲಿ, ರಾಮನಕೊಪ್ಪ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version