ಹುಬ್ಬಳ್ಳಿ – 18. ಸುನದಾ ಗಾನಸುಧಾ ವತಿಯಿಂದ 18-11-2023 ರ ಶನಿವಾರ ಸಂಜೆ 6:00 ಗಂಟೆಗೆ ರಾಮಕೃಷ್ಣ ವಿವೇಕಾನಂದ ಆಶ್ರಮ, 3ನೇ ಮುಖ್ಯ, 5ನೇ ಅಡ್ಡ ರಸ್ತೆ, ಕಲ್ಯಾಣ ನಗರ, ಹುಬ್ಬಳ್ಳಿಯಲ್ಲಿ ಕರ್ನಾಟಕೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ,ವಿದ್ವಾನ್ ರಾಕೇಶ ದತ್ ಅವರಿಂದ ಕೊಳಲು ವಾದನ ಇವರೊಂದಿಗೆ ವಿದ್ವಾನ್ ನಾಗೇಂದ್ರ ಪ್ರಸಾದ ಮೃದಂಗ ಸಾಥ ವಿದ್ವಾನ್ ಕಾರ್ತಿಕ ಕೌಶಿಕ ಪಿಟೀಲು ಸಾಥ್ ನೀಡಿದರು. ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ರಘುವೀರಾನಂದಜಿ ಮಹಾರಾಜ್ ಈ ಸಂದರ್ಭದಲ್ಲಿ ಮಾತನಾಡುತ್ತಾ ಇಂತಹ ಯುವ ಕಲಾವಿದರ ಸಂಗೀತ ಕಾರ್ಯಕ್ರಮ ಆಶ್ರಮದಲ್ಲಿ ಆಯೋಜನೆ ಮಾಡಿರುವುದು ನಮಗೆ ಖುಷಿಯನ್ನು ತಂದಿದೆ ಹಾಗೂ ಇಂತಹ ಯಾವುದೇ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಿಕ್ಕೆ ಆಶ್ರಮ ಸದಾ ಸಹಕಾರ ನೀಡುತ್ತದೆ ತಾವು ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಆಯೋಜಕರಿಗೆ ತಿಳಿಸಿದರು ಮತ್ತು ಇಂತಹ ಸಂಗೀತ ಕಾರ್ಯಕ್ರಮಗಳಿಗೆ ಹುಬ್ಬಳ್ಳಿಯ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹಿಸಬೇಕೆಂದರು. ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಸ್ವಾಮಿ ಬುದ್ಧಿಯೋಗಾನಂದಜಿ ಮಹಾರಾಜ್, ಪರಮ ಪೂಜ್ಯ ಶ್ರೀ ಸ್ವಾಮಿ ಗುರುದೇವಚರಣಾನಂದ ಮಹಾರಾಜ್, ದಯಾನಂದ ರಾವ್ ತಬಲಾ ಕಲಾವಿದ ಡಾ. ನಾಗಲಿಂಗ ಮುರಗಿ, ಸತೀಶ್ ರಾವ್ ಡಾ. ಸುರೇಶ ಹೋರಕೇರಿ, ಸತೀಶ ರಾವ್ ಉಪಸ್ಥಿತರಿದ್ದರು. ಗಾನಸುಧ ಸಂಸ್ಥೆಯ ಅಧ್ಯಕ್ಷ ಶಿವಪ್ರಸಾದ ಬೇಕಲ್ ಸ್ವಾಗತಿಸಿದರು, ಕಾರ್ಯದರ್ಶಿ ಲತಾ ಜಮಖಂಡಿ ವಂದಿಸಿದರು. ಹುಬ್ಬಳ್ಳಿಯ ಅನೇಕ ಕರ್ನಾಟಕೀ ಸಂಗೀತ ಗುರುಗಳು ವಿದ್ಯಾರ್ಥಿಗಳು ಆಶ್ರಮದ ಭಕ್ತವೃಂದ ಸಂಗೀತಾಸಕ್ತರು ಭಾಗವಹಿಸಿದ್ದರು.