Site icon MOODANA Web Edition

ವಿಕಲಚೇತನರ ಉಚಿತ ಆರೋಗ್ಯ ಶಿಬಿರ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.18: ತಾಲೂಕಿನ ಛಬ್ಬಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಹುಬ್ಬಳ್ಳಿ ಗ್ರಾಮ ಪಂಚಾಯಿತಿ ಬಂಡವಾಡ ಇವರ ಸಹಯೋಗದಲ್ಲಿ ಗ್ರಾಮದ ವಿಕಲಚೇತನರ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು.
ಎಚ್‍ಐಓ ಡಾ. ಎಸ್.ಬಿ ಪೂಜಾರ ಅವರು ಮಾತನಾಡಿ, ಗ್ರಾಮದ ಎಲ್ಲ ವಿಕಲಚೇತನರು ಶಿಬಿರದಲ್ಲಿ ತಪ್ಪದೇ ತಪಾಸಣೆ ಮಾಡಿಸಿಕೊಂಡು ರೋಗದಿಂದ ಗುಣಮುಖರಾಗಿ ಎಂದರು
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಹಮ್ಮಿದ್ ಮುಲ್ಲಾ, ಉಪಾಧ್ಯಕ್ಷ ರಸೂಲ ಬಿ ಮುಲ್ಲಾ, ಭಗವಂತ ಬಸಾಪೂರ, ಎಸ್.ಕೆ ವಾಲಿಕಾರ, ಕಾವೇರಿ ಶೇರಖಾಣಿ, ಅನೀತಾ ಊರಣಕರ, ಆಶಾ ಬಸಮ್ಮ ಹೊಂಗಲ, ಗಿರಿಜಾ ಮಡಿವಾಳರ, ತಾಲೂಕು ವಿವಿದ್ದೋದೇಶ ಪುನರ್ವಸತಿ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ, ವಿ.ಆರ್.ಡ್ಲ್ಯೂ ದ್ಯಾಮಣ್ಣ ಕರೇಟ್ಟಗೌಡ್ರ, ಗ್ರಾಪಂ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version