Site icon MOODANA Web Edition

ವಿಕಲಚೇತನರು ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ-ನಿಂಗವ್ವ ಬಸಪ್ಪ ಬೆಂಡಿಗೇರಿ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.18: ಗ್ರಾಮದ ವಿಕಲಚೇತನರು ಶಿಬಿರದಲ್ಲಿ ಪಾಲ್ಗೊಂಡು ಖಾಯಿಲೆಗಳನ್ನು ತಪ್ಪದೇ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಗ್ರಾ.ಪಂ ಅಧ್ಯಕ್ಷ ನಿಂಗವ್ವ ಬಸಪ್ಪ ಬೆಂಡಿಗೇರಿ ಹೇಳಿದರು.
ತಾಲೂಕಿನ ಶರೇವಾಡ ಗ್ರಾಮದಲ್ಲಿ ವಿಕಲಚೇತನರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಿ, ಅವರು ಮಾತನಾಡಿದರು.
ತಮಗೆ ಇರುವ ಸಮಸ್ಯೆ, ತೊಂದರೆಗಳನ್ನು ತ್ವರಿತವಾಗಿ ಪತ್ತೆ ಹಚ್ಚಿಸಿಕೊಂಡು ಬೇಗ ಗುಣಮುಖರಾಗಿ ಆರೋಗ್ಯವಂತರಾಗಬೇಕು. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದರು.
ಶಿಬಿರದಲ್ಲಿ ಸಕ್ಕರೆ ಖಾಯಿಲೆ, ಅಪೌಷ್ಠಿಕತೆ, ರಕ್ತಹೀನತೆ, ಅಧಿಕ ರಕ್ತದೊತ್ತಡ ಹಾಗೂ ಟಿಬಿ ಖಾಯಿಲೆಯಂತಹ ರೋಗಗಳನ್ನು ವೈದ್ಯರು ತಪಾಸಣೆ ನಡೆಸಿದರು,
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸಿದ್ದಪ್ಪ ನಿಂಗಪ್ಪ ಹನ್ನಿ ಕಾರ್ಯದರ್ಶಿ ಎಸ್.ವಿ ಹೆಬ್ಬಳ್ಳಿ, ಪ್ರಾಥಮಿಕ ಆರೋಗ್ಯ ಇಲಾಖೆಯ ಸಿ.ಎಚ್.ಒ ನಾಗಮ್ಮ ಮಡಿವಾಳರ, ಡಿ.ಎಚ್.ಸಿಒ ನೇತ್ರಾವತಿ ಮಡಿವಾಳರ, ತಾಲೂಕ ವಿವಿಧುದ್ಯೋಶ ಪುನರ್ವಸತಿ ಕಾರ್ಯಕರ್ತ ಮಹಾಂತೇಶ ಕುರ್ತಕೊಟಿ, ವಿ.ಆರ್.ಡಬ್ಲೂ ನಿಂಬಣ್ಣ ಕೊಪ್ಪದ, ಆಶಾ ಸೀಮಾ ಬರದ್ವಾಡ, ಗಿರಿಜಾ ಅಣ್ಣಿಗೇರಿ, ಶಕುಂತಲಾ ಅಣ್ಣಿಗೇರಿ, ವಿಜಯಲಕ್ಷ್ಮೀ ಅಣ್ಣಿಗೇರಿ, ಗ್ರಾ.ಪಂ, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version