ಬೆಂಗಳೂರು, ನವೆಂಬರ್ 18 (ಕರ್ನಾಟಕ ವಾರ್ತೆ) :
ಶ್ರೀ ಬಿ.ಕೆ. ಭಟ್ಟಾಚಾರ್ಯ, ಹಿರಿಯ ಭಾ.ಆ.ಸೇ (ನಿವೃತ್ತ) ಅಧಿಕಾರಿ ಹಾಗೂ ಪೂರ್ವ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಅವರು 17ನೇ ನವೆಂಬರ್ 2023 ರಂದು ನಿಧನ ಹೊಂದಿರುತ್ತಾರೆ.
ಅವರಿಗೆ ಸುಮಾರು ಎರಡು ದಿನಗಳಿಂದ ಉಸಿರಾಟದ ತೊಂದರೆ ಕಂಡುಬಂದಿದ್ದು, 17ನೇ ನವೆಂಬರ್ ರಂದು ಮಣಿಪಾಲ್ ಆಸ್ಪತ್ರೆಯಲ್ಲಿ ಮುಂದಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಅದೇ ದಿನ ಸಾಯಂಕಾಲ ಅವರು ನಿಧನಹೊಂದಿರುತ್ತಾರೆ. 5ನೇ ಡಿಸೆಂಬರ್ 1940 ರಲ್ಲಿ ಜನಿಸಿದದ ಅವರು ಕರ್ನಾಟಕದಲ್ಲಿ ಐ.ಏ.ಎಸ್ ಶ್ರೇಣಿಯಲ್ಲಿ ಸೇವೆ ಸಲ್ಲಿಸಿ 30ನೇ ಡಿಸೆಂಬರ್ 2000 ಇಸವಿಯಲ್ಲಿ ಸೇವಾ ನಿವೃತ್ತಿ ಹೊಂದಿರುತ್ತಾರೆ. ಅವರಿಗೆ ಪ್ರಸ್ತುತ 83 ವರ್ಷಗಳ ವಯಸ್ಸಾಗಿತ್ತು. ಅವರು ಪತ್ನಿ ಶ್ರೀಮತಿ ತೆರೇಸಾ ಭಟ್ಟಾಚಾರ್ಯ ಹಾಗೂ ಎರಡು ಮಕ್ಕಳನ್ನು ಅಗಲಿರುತ್ತಾರೆ.
ಭಾರತೀಯ ಅಧಿಕಾರಿಗಳ ಸಂಘದ ಸದಸ್ಯರುಗಳು ಶ್ರೀ ಬಿ.ಕೆ. ಭಟ್ಟಾಚಾರ್ಯರವರ ಹಠಾತ್ ನಿಧನಕ್ಕೆ ತೀವ್ರವಾದ ಸಂತಾಪವನ್ನು ವ್ಯಕ್ತಪಡಿಸಿರುತ್ತಾರೆ.