ಬೆಂಗಳೂರು, ನವೆಂಬರ್ 18 (ಕರ್ನಾಟಕ ವಾರ್ತೆ) :
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ 2001-02 ರಿಂದ 2012-13ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಸ್ನಾತಕ/ಸ್ನಾತಕೋತ್ತರ ಪದವಿಗಳು, ಸ್ನಾತಕ/ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳು ಹಾಗೂ ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶಾತಿ ಪಡೆದು ಅನುತ್ತೀರ್ಣರಾಗಿರುವ / ಅನೇಕ ಕಾರಣಗಳಿಂದ ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ ಸ್ನಾತಕ/ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳಲು ಬಾಕಿ ಇರುವ ವಿಷಯಗಳಿಗೆ ಪರೀಕ್ಷೆಯನ್ನು ಬರೆಯಲು ಒಂದು ಅವಕಾಶವನ್ನು ಕಲ್ಪಿಸಲಾಗಿದೆ.
2001-02 ರಿಂದ 2012-13ನೇ ಶೈಕ್ಷಣಿಕ ಸಾಲಿನ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷಗಳ ಬಿ.ಎ./ಬಿ.ಕಾಂ./ಬಿ.ಲಿಬ್.ಐ.ಎಸ್ಸಿ./ಬಿ.ಇಡಿ./ಬಿ.ಇಡಿ.(ವಿಶೇಷ)/ಎಂ.ಎ./ಎಂ.ಕಾಂ./ಎಂ.ಬಿ.ಎ./ಎಂ.ಎಸ್ಸಿ./ಎಂ.ಟಿ.ಎಂ./ಎಲ್.ಎಲ್.ಎಂ./ ಎಂ.ಬಿ.ಎ.(ಲಾ)/ಎಂ.ಇಡಿ. (1,2,3 & 4 ಸೆಮಿಸ್ಟರ್) ಪದವಿಗಳು ಹಾಗೂ ಸ್ನಾತಕ/ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳು.
ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ 16ನೇ ಡಿಸಂಬರ್ 2023 ಹಾಗೂ ರೂ. 200/- ದಂಡ ಶುಲ್ಕದೊಂದಿಗೆ ದಿನಾಂಕ: 30ನೇ ಡಿಸೆಂಬರ್ 2023 ಕೊನೆಯ ದಿನಾಂಕವಾಗಿದ್ದು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ www.ksoumysuru.ac.in ಮೂಲಕವೇ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ. ಬೆಂಗಳೂರು ಪ್ರಾದೇಶಿಕ ಕೇಂದ್ರ, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-560026, ದೂರವಾಣಿ ಸಂಖ್ಯೆ: 080-2660 3664 ಹಾಗೂ 98449-65515ನ್ನು ಸಂಪರ್ಕಿಸುವುದು.
ಕರಾಮುವಿಯ ವಿದ್ಯಾರ್ಥಿಗಳು ವಿವಿಯು ನೀಡಿರುವ ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಂಡು ಅರ್ಧಕ್ಕೆ ನಿಂತಿದ್ದ ತಮ್ಮ ಕನಸಿನ ಸ್ನಾತಕ/ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳಬೇಕೆಂದು ಪ್ರಾದೇಶಿಕ ನಿರ್ದೇಶಕರಾದ ದಿಲೀಪ. ಡಿ. ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.