ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.18: ತಾಲೂಕಿನ ಬಂಡವಾಡ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಹುಬ್ಬಳ್ಳಿ ಗ್ರಾಮ ಪಂಚಾಯಿತಿ ಬಂಡವಾಡ ಇವರ ಸಹಯೋಗದಲ್ಲಿ ಗ್ರಾಮದ ವಿಕಲಚೇತನರ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು.
ಸಮುದಾಯ ಆರೋಗ್ಯ ಅಧಿಕಾರಿ ದೀಪ ಕರದಿನ ಮಾತನಾಡಿ, ಆರೋಗ್ಯವೇ ಭಾಗ್ಯ ಆರೋಗ್ಯದ ಕಡೆ ಪ್ರತಿಯೊಬ್ಬರು ಗಮನ ಹರಿಸಬೇಕು ಮತ್ತು ಇರಬೇಕು. ಪೌಷ್ಟಿಕ ಆಹಾರದ ಬಗ್ಗೆ ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿ, ಗ್ರಾಮದ ವಿಕಲಚೇತನರು ಆರೋಗ್ಯ ತಪಾಸಣೆ ಶಿಬಿರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಬಿರದಲ್ಲಿ ಸಕ್ಕರೆ ಖಾಯಿಲೆ, ಅಪೌಷ್ಠಿಕತೆ, ರಕ್ತಹೀನತೆ, ಅಧಿಕ ರಕ್ತದೊತ್ತಡ ಹಾಗೂ ಟಿಬಿ ಖಾಯಿಲೆಯಂತಹ ರೋಗಗಳನ್ನು ವೈದ್ಯರು ತಪಾಸಣೆ ನಡೆಸಿದರು,
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಬೇಗ ಹುಬ್ಬಳ್ಳಿ, ಕೆ.ಎಚ್.ಪಿ.ಟಿ ಹುಬ್ಬಳ್ಳಿ ತಾಲೂಕಿನ ಸಂಯೋಜಕ ದ್ರಾಕ್ಷಾಯಿಣಿ ಹಂಪಣ್ಣವರ, ವಿ.ಆರ್.ಡಬ್ಲೂ್ಯ ಹಜರೆಸಾಬ್ ಬೆಂಕಿ ಗ್ರಾಪಂ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.
ಆರೋಗ್ಯವೇ ಭಾಗ್ಯ ಆರೋಗ್ಯದ ಕಡೆ ಗಮನಹರಿಸಿ
