22 C
Karnataka
Sunday, March 22, 2026
spot_img

24/7 ನಿರಂತರ ನೀರು ಸರಬರಾಜು ಕಾಮಗಾರಿ ವೇಗ ಹೆಚ್ಚಿಸಲು ಪಾಲಿಕೆ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಅವರಿಂದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೆ: ಎಲ್ & ಟಿ ಗೆ ತಾಕೀತು

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.17: ವಿಶ್ವಬ್ಯಾಂಕ್ ನೆರವಿನನೊಂದಿಗೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಡಿ (ಕುಸ್ಸೆಂಪ್) ನಗರದಲ್ಲಿ 24/7 ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಾಮಗಾರಿ ವೇಗ ಹೆಚ್ಚಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಎಲ್&ಟಿ ಕಂಪನಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕ, ಕಚೇರಿ ಹುಬ್ಬಳ್ಳಿಯ ಸಭಾಭವನದಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದಲ್ಲಿ ನಡೆಯುತ್ತಿರುವ 24/7 ನಿರಂತರ ನೀರು ಸರಬರಾಜು ಯೋಜನೆಯ ನಿರಂತರ ನೀರು ಸರಬರಾಜು ಯೋಜನಾ ಕಾಮಗಾರಿಗಳ ವೇಗವನ್ನು ಹೆಚ್ಚಿಸಿ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಮುಕ್ತಾಯ ಮಾಡಲು ಸಭೆಯಲ್ಲಿ ಸೂಚಿಸಿದರು. ಸವದತ್ತಿ ಜಾಕವೆಲ್‍ನಿಂದ ಅಮ್ಮೀನಭಾವಿ ಜಲಶುದ್ಧೀಕರಣ ಘಟಕದವರೆಗೆ ಅಳವಡಿಸುತ್ತಿರುವ ಪೈಪಲೈನ್ ಕಾಮಗಾರಿಯನ್ನು ಈ ಮಾಸಾಂತ್ಯದಲ್ಲಿ ಪೂರ್ಣಗೊಳಿಸಲು ಸೂಚಿಸಿದರು ಹಾಗೂ ಅಮ್ಮೀನಭಾವಿ ಜಲಶುದ್ಧೀಕರಣ ಘಟಕದಿಂದ ರಾಯಾಪೂರ ಜಲಸಂಗ್ರಹಗಾರದವರೆಗೆ ಅಳವಡಿಸುತ್ತಿರುವ ಪೈಪಲೈನ್ ಕಾಮಗಾರಿಯನ್ನು ಚುರುಕುಗೊಳಿಸಲು ಸೂಚಿಸಿದರು. ಉಳಿದಂತೆ ಜಲಶುದ್ಧೀಕರಣ ಘಟಕ, ಮೇಲ್ಮಟ್ಟದ ಹಾಗೂ ನೆಲಮಟ್ಟದ ಜಲಸಂಗ್ರಹ ಕಾಮಗಾರಿಗಳನ್ನು ವೇಗವಾಗಿ ಹೆಚ್ಚಿನ ತಂಡಗಳನ್ನು ನಿಯೋಜಿಸಿ ಕಾಮಗಾರಿ ಮುಕ್ತಾಯ ಮಾಡಲು ಸೂಚಿಸಿದರು.
ನೀರು ಸರಬರಾಜು ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ದುರಸ್ಥಿ ಕಾರ್ಯಗಳು ಇದ್ದಲ್ಲಿ ಕೂಡಲೇ ಗಮನಕ್ಕೆ ತಂದು ದುರಸ್ಥಿ ಕಾರ್ಯವನ್ನು ಕೈಗೊಳ್ಳಲು ತಿಳಿಸಿದರು ಹಾಗೂ ಕಳೆದ ಕೆಲವು ದಿನಗಳಿಂದ ಗೌರವಾನ್ವಿತ ಮಹಾನಗರಪಾಲಿಕೆಯ ಸದಸ್ಯರು ಹಾಗೂ ಸಾರ್ವಜನಿಕರು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಕೆಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತುಂಬಾ ವ್ಯತ್ಯಯವಾಗುತ್ತಿರುವ ಬಗ್ಗೆ ದೂರುತ್ತಿದ್ದು, ಮೆ// ಎಲ್ & ಟಿ ಕಂಪನಿಯವರು ಕೆಲವು ಟ್ಯಾಂಕಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದು, ಇದನ್ನು ಶೀಘ್ರವಾಗಿ ಪೂರ್ಣಗೊಳಿಸಿ ನೀರು ಪೂರೈಕೆಯನ್ನು ಸರಿಪಡಿಸಲು ಮೆ// ಎಲ್ & ಟಿ ಕಂಪನಿಯವರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಅಲ್ಲದೇ ಈಗಾಗಲೇ ನಳ ಸಂಪರ್ಕ ಅಧೀಕೃತಗೊಳಿಸಿಕೊಳ್ಳಲು ಮಹಾನಗರ ಪಾಲಿಕೆಯು ಸಾರ್ವಜನಿಕ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಅನಧೀಕೃತ ನಳ ಸಂಪರ್ಕವನ್ನು ಹೊಂದಿದವರು ದಿನಾಂಕ 15-12-2023 ರೊಳಗಾಗಿ ಅನಧೀಕೃತ ನಳ ಸಂಪರ್ಕವನ್ನು ಅಧೀಕೃತಗೊಳಿಸಿಕೊಳ್ಳುವ ಅವಧಿಯನ್ನು ವಿಸ್ತರಿಸಲಾಗಿರುವ ಹಿನ್ನಲೆಯಲ್ಲಿ ಗಡುವು ನೀಡಿದ ಅವಧಿಯೊಳಗಾಗಿ ಅಧೀಕೃತಗೊಳಿಸಿಕೊಳ್ಳಬೇಕು ಇಲ್ಲವಾದಲ್ಲಿ ಅನಧೀಕೃತ ನಳ ಸಂಪರ್ಕಗಳನ್ನು ಕಡಿತಗೊಳಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮುಂದುವರೆದು ಆಯುಕ್ತರು ಮಾತನಾಡುತ್ತ ಮಹಾನಗರ ಪಾಲಿಕೆಯ ಗಮನಕ್ಕೆ ತರದೆ ಅನಧೀಕೃತ ನಳ ಸಂಪರ್ಕವನ್ನು ಪಡೆದಿದ್ದರೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿರುತ್ತಾರೆ. ಈ ರೀತಿಯಾಗಿ ಅನಧೀಕೃತ ನಳ ಸಂಪರ್ಕವನ್ನು ಪಡೆಯದೇ ಸಂಬಂಧಿಸಿದ ವಲಯ ಕಛೇರಿಗಳಿಗೆ ಭೇಟಿ ನೀಡಿ ಸರ್ಕಾರ ಸೂಚಿಸಿದ ದಾಖಲಾತಿಗಳನ್ನು ನೀಡಿ, ನಳ ಸಂಪರ್ಕದ ಮೊತ್ತವನ್ನು ಪಾವತಿಸಿ ರಸೀದಿ ಪಡೆದು ಅಧೀಕೃತ ನಳ ಸಂಪರ್ಕವನ್ನು ಪಡೆಯಲು ಸೂಚಿಸಿದರು.
ಸಭೆಯಲ್ಲಿ ಕುಸ್ಸೆಂಪ್ ಯೋಜನಾ ಅನುಷ್ಠಾನ ಘಟಕದ ಕಾರ್ಯನಿರ್ವಾಹಕ ಇಂಜನೀಯರ್ ಶ್ರೀ ರವಿಕುಮಾರ ಟಿ ಸಿ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರರಾದ ಶ್ರೀ ಸುನೀಲ ಸಾಲಿ, ಕುಸ್ಸೆಂಪ್ ಯೋಜನಾ ಘಟಕದ ಅಧಿಕಾರಿಗಳು, ಸ್ಮೆಕ್ ಯೋಜನಾ ಸಮಾಲೋಚಕರು, ಎಲ್&ಟಿ ಕಂಪನಿಯ ಯೋಜನಾ ವ್ಯವಸ್ಥಾಪಕರು ಹಾಗೂ ಇತರೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!