24.9 C
Karnataka
Wednesday, February 5, 2025
spot_img

ನವೆಂಬರ್ 18 ಮತ್ತು 19 ರಂದು ರಾಜ್ಯದ ಪ್ರತಿ ಮತಗಟ್ಟೆಯಲ್ಲಿ ಮತದಾರರ ವಿಶೇಷ ನೋಂದಣಿ ಅಭಿಯಾನ

ಬೆಂಗಳೂರು, ನವೆಂಬರ್ 17, (ಕರ್ನಾಟಕ ವಾರ್ತೆ) :

ಭಾರತ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ರ ಅಂಗವಾಗಿ ರಾಜ್ಯದಲ್ಲಿರುವ ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ನವೆಂಬರ್ 18 ಶನಿವಾರ ಮತ್ತು 19 ಭಾನುವಾರದಂದು ವಿಶೇಷ ನೋಂದಣಿ ಅಭಿಯಾನವನ್ನು ನಡೆಸಲಿದೆ.

ಮತಗಟ್ಟೆ ಅಧಿಕಾರಿಗಳು ಈ ಎರಡೂ ದಿನಗಳಂದು ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಮತಗಟ್ಟೆಯಲ್ಲಿದ್ದು ಉಪಸ್ಥಿತರಿದ್ದು ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲಿದ್ದು, ಮತದಾರರು ತಮ್ಮ ಮತಗಟ್ಟೆಗೆ ನೇರವಾಗಿ ಬೇಟಿ ನೀಡಿ ಹೊಸದಾಗಿ ಹೆಸರು ಸೇರ್ಪಡೆ ಸೇರಿದಂತೆ ತಿದ್ದುಪಡಿ ಅಥವಾ ಬದಲಾವಣೆಗಳಿದ್ದಲ್ಲಿ ನೇರವಾಗಿ ಮಾಡಿಸಿಕೊಳ್ಳಬಹುದಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ/ಬದಲಾವಣೆ ಮಾಡಬಯಸಿದ್ದಲ್ಲಿ Voter Helpline Application ಡೌನ್ ಲೋಡ್ ಮಾಡಿಕೊಂಡು ಅಥವಾ https://voters.eci.gov.in ವೆಬ್‍ಸೈಟ್‍ಗೆ ಲಾಗಿನ್ ಆಗಿ ಆನ್‍ಲೈನ್ ಮೂಲಕ ಸಹ ಅರ್ಜಿ ಸಲ್ಲಿಸಬಹುದಾಗಿದೆ. ಸಂಬಂಧಿಸಿದ ಮತಗಟ್ಟೆಯ ಅಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿ ಕಚೇರಿಗೆ ಬೇಟಿ ನೀಡಿ ನೇರವಾಗಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಭಾರತ ಚುನಾವಣಾ ಆಯೋಗದ ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

18 ವರ್ಷ ತುಂಬಿದ ಅಥವಾ ತುಂಬುತ್ತಿರುವ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು  ವರ್ಷಕ್ಕೆ ನಾಲ್ಕು ಅವಕಾಶಗಳನ್ನು ನೀಡಲಾಗಿದೆ. ಜನವರಿ 1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ದಿನಗಳನ್ನು ಅರ್ಹತಾ ದಿನಗಳೆಂದು ಘೋಷಿಸಲಾಗಿದೆ.

ನಿಗಧಿತ ಅರ್ಜಿ ನಮೂನೆಗಳಲ್ಲಿ ಮತದಾರರು ತಮ್ಮ ಅಹವಾಲಗಳನ್ನು ಸಲ್ಲಿಸಬಹುದಾಗಿದ್ದು, ನಮೂನೆ 6 ಹೊಸ ಮತದಾರರ ನೋಂದಣಿಗಾಗಿ, ನಮೂನೆ 7 ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು, ನಮೂನೆ 6ಬಿ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು, ನಮೂನೆ 8 ವಿಳಾಸ ಬದಲಾವಣೆ/ಬದಲಿ ಮತದಾರರ ಗುರುತಿನ ಚೀಟಿ ನೀಡುವಿಕೆಗಾಗಿ, ಮತದಾರರ ಪಟ್ಟಿಯಲ್ಲಿ ತಪ್ಪುಗಳಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ಅಂಗವಿಕಲ ಮತದಾರರನ್ನು ಗುರುತಿಸಲು ಬಳಸಬಹುದಾಗಿದೆ.

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ಡಿಸೆಂಬರ್ 9 ರ ವರೆಗೆ ನಡೆಯಲಿದ್ದು, ಸಾರ್ವಜನಿಕರ ಸಹಾಯಕ್ಕಾಗಿ ವಿಶೇಷ ನೋಂದಣಿ ಅಭಿಯಾನವನ್ನು ನವೆಂಬರ್ ತಿಂಗಳ 18 ಮತ್ತು 19 ಹಾಗೂ ಡಿಸೆಂಬರ್ 02 ಮತ್ತು 03 ಶನಿವಾರ ಹಾಗೂ ಭಾನುವಾರಗಳಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!