Site icon MOODANA Web Edition

ಕೃಷಿಮೇಳ – 2023 ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನವೆಂಬರ್ 17, (ಕರ್ನಾಟಕ ವಾರ್ತೆ) :

ರಾಜ್ಯದಲ್ಲಿ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ನಮ್ಮ ಸರ್ಕಾರ “ಕೃಷಿ ಭಾಗ್ಯ” ಕಾರ್ಯಕ್ರಮವನ್ನು ಪುನರ್ ಆರಂಭಿಸಲು ಕ್ರಮವಹಿಸಿದೆ. ಕೃಷಿ ಕ್ಷೇತ್ರಕ್ಕೆ ಬೆಂಬಲ ನೀಡುವುದಲ್ಲದೆ, ಕೃಷಿ ಸಂಶೋಧನೆಗೆ ಅಗತ್ಯ ನೆರವು ಹಾಗೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕೃಷಿಮೇಳ 2023 ನ್ನು ಉದ್ಘಾಟಿಸಿ, ಮಾತನಾಡಿದ ಮುಖ್ಯಮಂತ್ರಿಗಳು ಕೃಷಿ ಮೇಳವನ್ನು ಬೆಂಗಳೂರು ವಿಶ್ವವಿದ್ಯಾಲಯವು ಪ್ರತಿ ವರ್ಷ ಆಯೋಜಿಸಿ ರಾಜ್ಯದ ರೈತರಿಗೆ ಕೃಷಿ ಆವಿμÁ್ಕರ, ತಂತ್ರಜ್ಞಾನ, ಹೊಸತಳಿಗಳು, ನೀರಿನ ಸಂರಕ್ಷಣೆ, ಭೂಮಿಯ ಫಲವತ್ತತೆ ಮುಂತಾದ ಕೃಷಿಗೆ ಸಂಬಂಧಿಸಿದಂತೆ ಅರಿವು ಮೂಡಿಸುತ್ತಿದೆ.

ಕೃಷಿ ವಿಶ್ವವಿದ್ಯಾಲಯವು ಪದವೀಧರರನ್ನು ತಯಾರು ಮಾಡುವುದರ ಜೊತೆಗೆ ಸಂಶೋಧನೆಗೆ ಮಹತ್ವ ನೀಡಬೇಕು. ನಮ್ಮ ದೇಶವು ಕೃಷಿ ಪ್ರಧಾನ ದೇಶವಾಗಿದೆ. ಕೃಷಿಯಿಂದ ಯುವಜನತೆಯು ವಿಮುಕ್ತರಾಗುತ್ತಿದ್ದಾರೆ. ಕೃಷಿಯಲ್ಲಿ ಲಾಭದಾಯಕವಾಗುವ ವಾತವರಣವನ್ನು ನಿರ್ಮಾಣ ಮಾಡುವುದರೊಂದಿಗೆ ಆಹಾರ ಉತ್ಪಾದನೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ತಿಳಿಸಿದರು.

ಹಸಿರು ಕ್ರಾಂತಿ ನಿರಂತರವಾಗಿ ನಡೆಯಬೇಕು. ಸ್ವಾಮಿನಾಥನ್ ಅವರು ತಿಳಿಸಿದಂತೆ ಹೊಸ ತಳಿ, ಹೊಸ  ಔಷಧಿ, ಮಣ್ಣಿನ ಫಲವತ್ತತೆ, ತಂತ್ರಜ್ಞಾನ, ರೈತರು ಬೆಳೆದ ಬೆಳೆಗೆ ನ್ಯಾಯ ಬೆಲೆ ದೊರೆಯುವಂತಾದಾಗ ಮಾತ್ರ  ಸುಸ್ಥಿರವಾದ ಕೃಷಿ ಬೆಳವಣಿಗೆ ಸಾಧ್ಯ ಎಂದರು. ಕೃಷಿ ಮೇಳದಲ್ಲಿ ಐದು ಹೊಸ ರೀತಿಯ ತಳಿಯನ್ನು ಬಿಡುಗಡೆ ಮಾಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.

ಹವಾಮಾನ ವೈಪರೀತ್ಯಗಳಿಂದ ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತದೆ. 223 ತಾಲ್ಲೂಕುಗಳು ಬರಗಾಲವೆಂದು ಘೋಷಿಸಿದೆ. ಸರ್ಕಾರವು ಸಬ್ಸಿಡಿ ನೀಡಬಹುದು. ಆದರೆ ಬೆಳೆ ನಷ್ಟ ನೀಡಲಾಗುವುದಿಲ್ಲ. ಈ ನಿಟ್ಟಿನಲ್ಲಿ ರೈತರನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕೃಷಿ ವಿಶ್ವವಿದ್ಯಾಲಯವು ಸಹ ಮಹತ್ವದ ಪಾತ್ರವನ್ನು ನಿರ್ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ರೈತರಿಗೆ ಸನ್ಮಾನಿಸಿ, ಮಣ್ಣು ಪರೀಕ್ಷಿಸುವ ಹೊಸ ಆ್ಯಫ್ ಗೆ ಚಾಲನೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ ಬರಗಾಲವಿರುವ ಕಾರಣ ನರೇಗಾ ಯೋಜನೆಯ ಮಾನವ ದಿನಗಳನ್ನು 100 ದಿನಗಳ ಬದಲು 150 ದಿನಗಳಿಗೆ ಏರಿಕೆ  ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರೈತರು ಏನೇ ಒತ್ತಡ ಬಂದರೂ ತಮ್ಮ ಜಮೀನುಗಳನ್ನು ಮಾರಾಟ ಮಾಡಿಕೊಳ್ಳಲು ಹೋಗಬೇಡಿ. ಇದು ವೈಯಕ್ತಿಕವಾದ ಮನವಿಯಲ್ಲ, ಸರ್ಕಾರದ ಮನವಿ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಆದಾಯ ತರುವಂತಹ ತಳಿಗಳ ಕುರಿತು ಹೆಚ್ಚು ಅಧ್ಯಯನ ನಡೆಸಬೇಕು. ಇದರಿಂದ ಅವರ ಬಾಳು ಹಸನಾಗುತ್ತದೆ. ಯಾರೂ ಸಹ ಭೂಮಿ ಮಾರಾಟ ಮಾಡಲು ಹೋಗುವುದಿಲ್ಲ. ನಮ್ಮ ಕರ್ನಾಟಕದಲ್ಲಿ ಬೆಳೆದ ಹೂವು, ಹಣ್ಣು ತರಕಾರಿಗಳು ಹೊರದೇಶಗಳಿಗೆ ರಫ್ತಾಗುತ್ತಿರುವುದು ಹೆಮ್ಮೆಯ ಸಂಗತಿ.

ನೀರಿನ ಸದ್ಬಳಕೆ ಮತ್ತು ಭೂಮಿಯ ಫಲವತ್ತತೆಯನ್ನು ಕಾಪಾಡುವ ಬಗ್ಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ರೈತರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ನಮ್ಮ ರಾಮನಗರದ ರೈತರಿಗಿಂತ ಈ ಭಾಗದ ರೈತರು ಚೆನ್ನಾಗಿ ಜೀವನ ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಭಾಗದ ರೈತರು ತರಕಾರಿ, ತೋಟಗಾರಿಕಾ ಬೆಳೆ ಸೇರಿದಂತೆ ಸಿಲ್ಕ್ ಮತ್ತು ಮಿಲ್ಕ್ ಕ್ರಾಂತಿಯನ್ನು ಮಾಡಿದ್ದಾರೆ. ರೇμÉ್ಮೀ ಕೃಷಿಯಲ್ಲಿ ಶಿಡ್ಲಘಟ್ಟ ಮತ್ತು ರಾಮನಗರ ಸಾಕಷ್ಟು ಮುಂದುವರೆದಿವೆ. ಮಾಜಿ ಕೃಷಿ ಸಚಿವರಾಗಿದ್ದ ಎಂ.ವಿ.ಕೃಷ್ಣಪ್ಪ ಅವರು ಆಗಲೇ ರೇμÉ್ಮೀ ಮತ್ತು ಕ್ಷೀರಕ್ರಾಂತಿಯ ಬಗ್ಗೆ ಯೋಚಿಸಿ, ಯೋಜನೆ ರೂಪಿಸಿದ್ದರು.

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂದು ಸರ್ವಜ್ಞ ಹೇಳುತ್ತಾನೆ. ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರು ಈ ದೇಶ ಮುನ್ನಡೆಯುತ್ತದೆ, ಆದರೆ ಪ್ರಜ್ಞಾವಂತರು ಇಲ್ಲದಿದ್ದರೆ ದೇಶ ನಡೆಯುವುದು ಕಷ್ಟ. ನಮ್ಮ ರೈತರು ಕಷ್ಟದಲ್ಲಿ ಇದ್ದರೂ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಇಂಜಿನಿಯರ್‍ಗಳನ್ನೇ ನಾಚಿಸುವಂತೆ ನಮ್ಮ ರೈತರು ಭೂಮಿಯಲ್ಲಿ ಕೆಲಸ ಮಾಡುತ್ತಾರೆ. ದನಗಳಿಗೆ ಏರು ಕಟ್ಟಿ ಸಾಲು ಹೊಡೆಯುವುದು, ಗದ್ದೆಯಲ್ಲಿ ಮಹಿಳೆಯರು ಪೈರು ನಾಟಿ ಮಾಡುವಷ್ಟು ಅಚ್ಚುಕಟ್ಟಾಗಿ ಯಾವ ಇಂಜಿನಿಯರ್‍ಗಳು ಸಹ ಗೆರೆ ಹಾಕಲು ಸಾಧ್ಯವಿಲ್ಲ.
ಒಕ್ಕಲುತನಕ್ಕೆ ಯಾವುದೆ ಜಾತಿ, ಧರ್ಮವಿಲ್ಲ. ಯಾರು ಈ ಭೂಮಿಯನ್ನು ಕಾಪಾಡಿಕೊಂಡು ಹಸಿದವನಿಗೆ ಅನ್ನ ಹಾಕುತ್ತ ಇರುವುದೇ ದೊಡ್ಡ ದೇಶಸೇವೆ. ಜೈ ಜವಾನ್ ಜೈ ಕಿಸಾನ್ ಮಾತಿನಂತೆ ಈ ಭೂಮಿಯನ್ನು ಕಾಪಾಡಿಕೊಂಡು ಬರುತ್ತಿರುವುದೇ ಕೃಷಿಕ ಸಮುದಾಯ ಎಂದು ತಿಳಿಸಿದರು.

ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಮಾತನಾಡಿ, ಕೃಷಿಯೇ ಪ್ರಧಾನವಾಗಿರುವ ನಮ್ಮ ನಾಡಿನಲ್ಲಿ ರೈತರ ಬದುಕು ಅಸ್ಥಿರವಾದಂತೆ. ರಾಜ್ಯವಸರ್ಕಾರ ಹಾಗೂ ಕೃಷಿ ವಿವಿಗಳು ಅವರಿಗೆ ನಿರಂತರವಾಗಿ ಹಲವು ರೀತಿಯ ನೆರವು ಒದಗಿಸುತ್ತಿವೆ ಎಂದು ತಿಳಿಸಿದರು. .

ರೈತರು ನಿರಂತರ ಪ್ರಾಕೃತಿಕ ಸವಾಲು ಎದುರಿಸಿ, ಪರಿಶ್ರಮ ಪಟ್ಟು ಕೃಷಿ ನಡೆಸುತ್ತಿದ್ದು ಅವರ ನೆರವಿಗೆ ರಾಜ್ಯ ಸರ್ಕಾರ ಸದಾ ನಿಲ್ಲಲಿದೆ. ರೈತರು ವೈಜ್ಞಾನಿಕ ಹಾಗೂ ಸಮಗ್ರ ಬೇಸಾಯದ ಬಗ್ಗೆ ಎಚ್ಚು ಗಮನ ಹರಿಸಬೇಕು, ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಬೇಕು ಇದಕ್ಕೆ ಕೃಷಿ ವಿವಿಗಳು ನೆರವಾಗಬೇಕು. ಬೆಂಗಳೂರು ಕೃಷಿ ವಿವಿ 32 ಕ್ಕೂ ಹೆಚ್ಚು ತಂತ್ರಜ್ಞಾನ, ಐದು ಹೊಸ ತಳಿಗಳನ್ನು ಈ ವರ್ಷ ಕೃಷಿಕರಿಗೆ ಪರಿಚಯಿಸಿರುವುದು ಅಭಿನಂದನಾರ್ಹ ಎಂದು ಸಚಿವ ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್ಚು ಧಾನ್ಯಗಳ ಉತ್ಪಾದನೆ ನಮ್ಮ ದೇಶದ ಹಿರಿಮೆ. ಕೃಷಿ ವಿವಿಗಳು ಹೊಸ ತಳಿಗಳು ಹಾಗೂ ತಂತ್ರಜ್ಞಾನದ ಮೂಲಕ ಕಡಿಮೆ ನೀರು ಹಾಗೂ ಸೀಮಿತ ಖರ್ಚಿನಲ್ಲಿ ಅಧಿಕ ಲಾಭ ಪಡೆಯಲು ನೆರವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಸದಸ್ಯರಾದ ಶರತ್ ಬಚ್ಚೇಗೌಡ, ಕೃಷಿ ವಿಶ್ವವಿದ್ಯಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ್ ಸೇರಿದಂತೆ ಗಣ್ಯರು ಹಾಗೂ ರೈತರು ಉಪಸ್ಥಿತರಿದ್ದರು.

Exit mobile version