Site icon MOODANA Web Edition

ಅಂಗವಿಕಲರ ಆರೋಗ್ಯ ತಪಾಸಣೆ ಅಗತ್ಯ: ಡಾ. ಹುಲಗಣ್ಣ ಇಂಜಗನವರ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.17: ಅಂಗವಿಕಲರು ರೋಗವನ್ನು ತಪಾಸಣೆ ಮಾಡಿಸಿಕೊಂಡು ಸೂಕ್ತ ವೈದ್ಯಕೀಯ ಸೌಲಭ್ಯ ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಡಾ. ಹುಲಗಣ್ಣ ಇಂಜಗನವರ ಹೇಳಿದರು.
ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ತಾಲೂಕ ಪಂಚಾಯತಿ ಹುಬ್ಬಳ್ಳಿ, ಗ್ರಾಮ ಪಂಚಾಯತಿ ಅದರಗುಂಚಿ ಇವರ ಸಹಯೋಗದಲ್ಲಿ ಗ್ರಾಮದ ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣಾ ಶಿವರವನ್ನು ಆಯೋಜಿಸಿ ಅವರು, ಮಾತನಾಡಿದರು.
ಖಾಯಿಲೆಗಳು ವಿಪರೀತವಾಗಿ ಹರಡುತ್ತಿರುವುದರಿಂದ ಅಂಗವಿಕಲರು ಅರೋಗ್ಯ ರಕ್ಷಿಸಿಕೊಳ್ಳುವುದು ಪ್ರಮುಖ ಅದ್ಯತೆಯಾಗಿರುತ್ತದೆ. ಆದ್ದರಿಂದ ಅಂಗವಿಕಲರು ಅರೋಗ್ಯ ತಪಾಸಣೆ ಮಾಡಿಕೊಂಡು ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ತಾಲೂಕ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ ಮಾತನಾಡಿ, ಗ್ರಾಮದ ಎಲ್ಲ ವಿಕಲಚೇತನರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಬಿಪಿ ಶುಗರ್ ರಕ್ತಹೀನತೆ ಟಿಬಿ ರೋಗಗಳ ಬಗ್ಗೆ ತಪಾಸಣೆಯನ್ನು ಮಾಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ 60 ವಿಕಲಚೇತನರು ಭಾಗವಹಿಸಿ ಸದರಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಮೆಹರುಬಿ ದಾವಲ್ ಸಾಬ್ ನದಾಫ್ ಉಪಾಧ್ಯಕ್ಷ ಶಂಕರಗೌಡ ನೀಲಪ್ಪ ಗೌಡ್ರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೃತ್ ಹಡಪದ, ವಿ.ಆರ್.ಡಬ್ಲ್ಯೂ ಬಸವರಾಜ ಸೋಮಕ್ಕನವರ, ಗ್ರಾ.ಪಂ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಇದ್ದರು.

Exit mobile version