Site icon MOODANA Web Edition

ರಶೀದಿ ಪುಸ್ತಕ ಕಾಣೆ

ಹುಬ್ಬಳ್ಳಿ (ಕರ್ನಾಟಕವಾರ್ತೆ) ನ.9: ಹೆಸ್ಕಾಂನ ಕಲಘಟಗಿ ಉಪ ವಿಭಾಗದ ನಗದು ಶಾಖೆಯ ಭದ್ರತಾ ಕೊಠಡಿಯಲ್ಲಿದ್ದ ಹೆಚ್‍ಜೆ-1263-091 ಸರಣಿಯ ನಗದು ಪುಸ್ತಕವು ಕಳೆದಿದೆ. ರಶೀದಿ ಪುಸ್ತಕಗಳನ್ನು ಪರಿಶೀಲಿಸಿದಾಗ ಪುಸ್ತಕದಲ್ಲಿನ ರಶೀದಿ ಕ್ರಮ ಸಂಖ್ಯೆ 36001 ರಿಂದ 36400 ವರೆಗೆ ರಶೀದಿಗಳು ಸ್ಥಳದಲ್ಲಿಯೇ ಇವೆ. ರಶೀದಿ ಪುಸ್ತಕವು ಕಾಣೆಯಾದ ಬಗ್ಗೆ ಕಲಘಟಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ರಶೀದಿ ಪುಸ್ತಕವು ಬೇರೆಯವರ ಕೈಯಲ್ಲಿ ಸಿಕ್ಕು ದುರ್ಬಳಕೆ ಆಗುವ ಸಾದ್ಯತೆಗಳಿರುವುದರಿಂದ ರಶೀದಿ ಪುಸ್ತಕವು ವಿದ್ಯುತ್ ಬಿಲ್ ರಶೀದಿ ವಿತರಿಸಲು ಅಮಾನ್ಯವಾಗಿರುತ್ತದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ಅಂತಹ ವಿದ್ಯುತ್ ಬಿಲ್ಲ ರಶೀದಿ ಗ್ರಾಹಕರಿಗೆ/ಸಾರ್ವಜನಿಕರಿಗೆ ನೀಡಿರುವುದು ಕಂಡು ಬಂದಲ್ಲಿ ಅಂತವರ ವಿಳಾಸವನ್ನು ಸಹಾಯಕ ಕಾರ್ಯನಿವಾಹಕ ಅಭಿಯಂತರರು(ವಿ), ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ, ಕಲಘಟಗಿ ಅಥವಾ ಕಾರ್ಯನಿರ್ವಾಹಕ ಅಭಿಯಂತರರು(ವಿ), ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ, ಹೆಸ್ಕಾಂ, ಧಾರವಾಡ ಅವರಿಗೆ ತಿಳಿಸಬೇಕೆಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version