Site icon MOODANA Web Edition

ಇಂದು ಕನಕಮಾರ್ಗ ಸಿನಿಮಾ ಪ್ರದರ್ಶನ

ಹುಬ್ಬಳ್ಳಿ: ನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಕನಕಮಾರ್ಗ ಸಿನಿಮಾ ಪ್ರದರ್ಶನವಾಗಲಿದೆ ದಾರ್ಶನಿಕ ಕನಕದಾಸರು ಈ ನಾಡಿಗೆ ತಮ್ಮ ತತ್ವ ವಿಚಾರಗಳ ಮೂಲಕ ಬಹುದೊಡ್ಡ ಕೊಡುಗೆಯನ್ನು ಕೊಟ್ಟವರು ಅವರ ತತ್ವ ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ.
ಹಾಗಾಗಿ ಅವರ ತತ್ವ ವಿಚಾರಗಳನ್ನು ಇಂದು ಯುವ ಜನತೆಯಲ್ಲಿ ಮೂಡಿಸುವುದು ಅವಶ್ಯಕತೆ ಇದೆ ಆ ಹಿನ್ನೆಲೆಯಲ್ಲಿ ಹೊರಪೇಟೆ ಮಲ್ಲೇಶಪ್ಪನವರ ಕನಕನ ಹೆಜ್ಜೆ ಕಾದಂಬರಿ ಆಧಾರಿತ ಕನಕ ಮಾರ್ಗ ಚಲನಚಿತ್ರವನ್ನು ಇಂದು ನಾಡಿನ ಯುವಕರು ಮಕ್ಕಳು ಹಾಗೂ ವಯೋವೃದ್ಧರು ಕೂಡ ನೋಡಲೇಬೇಕಾದ ಚಲನಚಿತ್ರ ಈ ಚಲನಚಿತ್ರವನ್ನು ನಿರ್ದೇಶಿಸಿದವರು ಶ್ರೀ ವಿಶಾಲ್ ರಾಜ್ ಡಿ ಎಫ್ ಎ ಸಂಭಾಷಣೆ ಡಾಕ್ಟರ್ ಜಗನ್ನಾಥ್ ಆರ್ ಗೇನಣ್ಣವರ, ಶ್ರೀ ವಸಂತ ರೆಡ್ಡಿ ನಿರ್ಮಾಣ ಪೆÇ್ರಡಕ್ಷನ್ ಬೆಳಗಾವಿ ನಿರ್ಮಾಪಕರು ಕೆಂಪೇಗೌಡ ಪಾಟಿಲ್ ತಾರಾ ಗಣದಲ್ಲಿ ಶ್ರೀ ಸುಜೇಂದ್ರಪ್ರಸಾದ್ ಗಿರೀಶ್ ಜತ್ತಿ ಸ್ಕಂದ ಮೈಸೂರು ಹೀಗೆ ಅನೇಕ ಜನ ಕಲಾವಿದರು ನಟಿಸಿದ್ದು
ಸಿನಿಮಾವನ್ನು ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ಇಂದು (ಶುಕ್ರವಾರ) ಬೆ.11 ಗಂಟೆ ಮತ್ತು ಮದ್ಯಾಹ್ನ ಕನಕಮಾರ್ಗ ಸಿನಿಮಾ ಪ್ರದರ್ಶನ ಮಾಡಲಾಗುವುದೆಂದು ಕೆಎಸ್‍ಎಸ್ ಕಾರ್ಯದರ್ಶಿ ರವೀಂದ್ರನಾಥ ದಂಡಿನರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಡಾ. ಬಿ ಎಫ್ ದಂಡಿನ, ಉಪಾಧ್ಯಕ್ಷರು ಡಾ ಶಾಂತಣ್ಣ ಕಡಿವಾಲ ಮತ್ತು ಕಾರ್ಯದರ್ಶಿ ರವಿ ದಂಡಿನ ಹಾಗೂ ಜಂಟಿಕಾರ್ಯದರ್ಶಿಗಳು ಡಾ ಪುನೀತಕುಮಾರ ಬೆನಕನವಾರಿ ಹಾಗೂ ಸಿನಿಮಾ ನಿರ್ದೆರ್ಶಕರು, ಸಂಭಾಶಣಕಾರರು ಉಪಸ್ಥಿತರಿರಲಿದ್ದಾರೆ.

Exit mobile version