ಬೆಂಗಳೂರು, ನವೆಂಬರ್ 07 (ಕರ್ನಾಟಕ ವಾರ್ತೆ) :
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಭಾರತ ಸರ್ಕಾರದ ಹೈದ್ರಾಬಾದಿನ ರಾಷ್ಟ್ರೀಯ ಮೀನುಗಾರಿಕ ಅಭಿವೃದ್ಧಿ ಮಂಡಳಿ. ಬೆಂಗಳೂರು ಹೆಸರಘಟ್ಟದ ಮೀನುಗಾರಿಕಾ ಸಾಂಶೋಧನೆ ಮತ್ತು ಮಾಹಿತಿ ಕೇಂದ್ರ (ಒಳನಾಡು) ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ “ಭಾರತದ ಪ್ರಮುಖ ಗೆಂಡೆ ಮೀನು ಮರಿಗಳ ಪಾಲನೆ” ವಿಷಯದ ಕುರಿತು ನವೆಂಬರ್ 09 ರಂದು ಒಂದು ದಿನದ ಕಾರ್ಯಾಗಾರವನ್ನು ಅಕಾಡೆಮಿ ಕಚೇರಿಯಾದ ಪ್ರೊ. ಯು.ಆರ್. ರಾವ್ ವಿಜ್ಞಾನ ಭವನ, ಮೇಜರ್ ಸಂದೀಪ್ ಉನ್ನೀಕೃಷ್ಣನ್ ರಸೆ, ತೋಟಗಾರಿಕಾ ವಿಜ್ಞಾನಗಳ ಕಾಲೇಜು ಆವರಣ, ಜಿ.ಕೆ.ವಿ.ಕೆ, ದೊಡ್ಡ ಬೆಟ್ಟಹಳ್ಳಿ ಲೇಔಟ್, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಗಾರವು ಮೀನು ಕೃಷಿಕರಿಗೆ / ಆಸಕ್ತ ರೈತರಿಗೆ / ಉದ್ಯಮಿಗಳಿಗೆ / ವಿದ್ಯಾರ್ಥಿಗಳಿಗೆ ಮೀನುಗಳ ಸಾಕಾಣೆಯ ಬಗ್ಗೆ ಹಾಗೂ ಪೌಷ್ಠಿಕಾಂಶಯುಕ್ತ ಆಹಾರವಾದ ಮೀನುಗಳ ಪಾಲನೆ ಮಾಡಲು ರೈತರಿಗೆ ತರಬೇತಿ ಮತ್ತು ಪ್ರಾಥಮಿಕ ಮಾಹಿತಿಯನ್ನು ನೀಡುವುದಾಗಿದೆ.
ಕಾರ್ಯಾಗಾರಕ್ಕೆ ನೋಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಯನ್ನು ಅಕಾಡೆಮಿಯ ಜಾಲತಾಣ http://www.ktcademy.in ನಲ್ಲಿ ಪಡೆಯಬಹುದಾಗಿದ್ದು, ಮೊದಲು ನೋಂದಾಯಿಸಿಕೊಂಡವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು.
ಹೆಚ್ಚಿನ ಮಹಿತಿಗಾಗಿ ಅಕಾಡೆಮಿಯ ವೈಜ್ಞಾನಿಕಾಧಿಕಾರಿಯಾದ ವಿ.ಕೆ. ಶ್ರೀನಿವಾಸು, ಮೊಬೈಲ್ ದೂರವಾಣಿ ಸಂ 9620767819 ಇವರಿಗೆ ಸಂಪರ್ಕಿಸಬಹದು ಎಂದು ಅಕಾಡೆಮಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.