Site icon MOODANA Web Edition

ಕಾಸಿಯಾದಲ್ಲಿ ವಿ.ಡಿ.ಪಿ. ಮತ್ತು ಕೈಗಾರಿಕಾ ವಸ್ತು ಪ್ರದರ್ಶನ

ಬೆಂಗಳೂರು, ನವೆಂಬರ್ 07 (ಕರ್ನಾಟಕ ವಾರ್ತೆ) :

ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ,  ಎಂ.ಎಸ್.ಎಂ.ಇ. ಅಭಿವೃದ್ಧಿ ಮತ್ತು ಸೌಲಭ್ಯ ಕಛೇರಿ, ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಬೆಂಗಳೂರು – ನಗರ ರವರ ಸಹಯೋಗದಲ್ಲಿ ವಿಜಯನಗರ ಕಾಸಿಯಾ ಉದ್ಯೋಗ ಭವನದಲ್ಲಿ ನವೆಂಬರ್ 9 ಮತ್ತು 10 ರಂದು ಬೆಳಿಗ್ಗೆ 10 ಗಂಟೆಗೆ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ.

ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ರವರು ಉದ್ಘಾಟಿಸಲಿದ್ದಾರೆ.

ಸೂಕ್ತವಾದ ಮಾರ್ಕೆಟಿಂಗ್ ಸಂಪರ್ಕಗಳನ್ನು ಒದಗಿಸುವ ಮೂಲಕ ತಮ್ಮ ಪರಸ್ಪರ ಲಾಭಕ್ಕಾಗಿ ಪ್ರಧಾನ ಸಾರ್ವಜನಿಕ ವಲಯದ ಘಟಕಗಳು ಮತ್ತು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ನಡುವೆ ಹೆಚ್ಚಿನ ವ್ಯಾಪಾರ ಸಮ್ಮಿಲನವನ್ನು ಸುಲಭಗೊಳಿಸುವುದು ಕಾರ್ಯಕ್ರಮದ ಪ್ರಧಾನ ಉದ್ದೇಶವಾಗಿದೆ.

ಕೇಂದ್ರದ ಸಾರ್ವಜನಿಕ ವಲಯದ ಉದ್ಯಮ ಘಟಕಗಳಾದ ಹೆಚ್.ಎ.ಎಲ್, ಬಿ ಹೆಚ್ ಇ ಎಲ್., ರೈಲ್ ವೀಲ್ ಫ್ಯಾಕ್ಟರಿ, ಕುದುರೆಮುಖ ಕಬ್ಬಿಣದ ಅದಿರು ಕಂಪನಿ, ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳಾದ ಬೆಸ್ಕಾಂ, ಮತ್ತು ಕರ್ನಾಟಕ ಏರೋಸ್ಪೇಸ್ ಟೆಕ್ನಾಲಜಿ ಸೆಂಟರ್‍ಗಳು ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ ಮತ್ತು ಸದರಿ ಸಂಸ್ಥೆಗಳ ಮಾರಾಟಗಾರರಾಗಿ ಎಸ್.ಎಂ.ಇ.ಗಳನ್ನು ನೋಂದಾಯಿಸಲು ಅನುಸರಿಸುವ ಕಾರ್ಯವಿಧಾನಗಳ ಬಗ್ಗೆ ಅರಿವು ಮೂಡಿಸಲಾಗುವುದು. ಎಂ.ಎಸ್.ಎಂ.ಇ ಗಳು ಒಂದೇ ವೇದಿಕೆಯಲ್ಲಿ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಉದ್ಯಮ ಘಟಕಗಳೊಂದಿಗೆ ಸಂವಹನ ನಡೆಸಲು ಅಪರೂಪದ ಅವಕಾಶವನ್ನು ಹೊಂದಿರುತ್ತವೆ.

ಈ ಕಾರ್ಯಕ್ರಮದಲ್ಲಿ  ಸಾರ್ವಜನಿಕ ವಲಯದ ಘಟಕಗಳು, ಸರ್ಕಾರಿ ಇಲಾಖೆಗಳು, ಇತ್ಯಾದಿಗಳ ಅಗತ್ಯತೆಗಳು, ಖರೀದಿ ನೀತಿ ಮತ್ತು ಕಾರ್ಯವಿಧಾನಗಳು, ನಿರ್ಣಾಯಕ, ಪ್ರಮುಖ ಮತ್ತು ಕೌಶಲ್ಯಯುಕ್ತ ವಸ್ತುಗಳ ಸ್ವದೇಶೀಕರಣ, ಮಾರಾಟಗಾರರ ನೋಂದಣಿ ಮತ್ತು ರೇಟಿಂಗ್, ಗುಣಮಟ್ಟದ ಮಾನದಂಡಗಳು, ವಿಶೇಷÀಣಗಳು ಇತ್ಯಾದಿ, ವಿಸ್ತರಣೆ ಮತ್ತು ಮಾರುಕಟ್ಟೆ ಇತ್ಯಾದಿಗಳಿಗೆ ಅವಕಾಶಗಳು ಅಂಶಗಳ ಮೇಲೆ ಗಮನ  ಹರಿಸಲಾಗುವುದು.

ಎಸ್.ಎಂ.ಇ. ವಲಯಗಳ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪಾತ್ರವು ಮಹತ್ವದ್ದಾಗಿದೆ ಮತ್ತು ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಸಿಡ್ಬಿ,  ಕರ್ಣಾಟಕ ಬ್ಯಾಂಕ್, ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ನಾಷನಲ್ ಬ್ಯಾಂಕ್, ಮತ್ತು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಂತಹ ಹಣಕಾಸು ಸಂಸ್ಥೆಗಳು ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ ಮತ್ತು ಎಸ್.ಎಂ.ಇ.ಗಳ ಬೆಳವಣಿಗೆಗಾಗಿ ಅಮೂಲ್ಯವಾದ ಬೆಂಬಲವನ್ನು ನೀಡಲು ತಮ್ಮಲ್ಲಿ ಲಭ್ಯವಿರುವ ಉತ್ಪನ್ನಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ.
ಈ ಕಾರ್ಯಕ್ರಮದಲ್ಲಿ ರಕ್ಷಣಾ, ಏರೋಸ್ಪೇಸ್, ಮೆಷಿನ್ ಟೂಲ್ಸ್, ಸಿಎನ್‍ಸಿ ಕ್ಲಸ್ಟರ್‍ಗಳು, ಮೆಷಿನ್ ಬಿಲ್ಡಿಂಗ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಬಯೋಟೆಕ್ನಾಲಜಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇತ್ಯಾದಿಗಳಿಂದ 90 ಕ್ಕೂ ಹೆಚ್ಚು ಘಟಕಗಳು ತಮ್ಮ ಸಾಮಥ್ರ್ಯಗಳನ್ನು ಪ್ರದರ್ಶಿಸಲಿವೆ.

ಉದ್ದಿಮೆದಾರರು ಹಾಗೂ ಭಾವಿ ಉದ್ದಿಮೆದಾರರು, ಎಂಜಿನಿಯರಿಂಗ್, ಕಲೆ ಮತ್ತು ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳು ಸಹ ತಮ್ಮ ವೃತ್ತಿ ಆಯ್ಕೆಯ ಅರಿವಿಗಾಗಿ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಕಾರ್ಯಕ್ರಮದ ಎರಡೂ ದಿನಗಳು ತಾಂತ್ರಿಕ ಸೆಷನ್‍ಗಳನ್ನು ಆಯೋಜಿಸಲಾಗುವುದು, ಖ್ಯಾತ ಭಾಷಣಕಾರರು ವಿವಿಧ ವಿಷಯಗಳ ಕುರಿತು ಪ್ರಸ್ತುತಿಗಳನ್ನು ಮಂಡಿಸಲಿರುವರು. ಕೈಗಾರಿಕಾ ವಸ್ತು ಪ್ರದರ್ಶನವು ನವೆಂಬರ್ 9 ಮತ್ತು 10ರÀಂದು ಬೆಳಿಗ್ಗೆ 10.00 ರಿಂದ ಸಂಜೆ 6.00 ರವರೆಗೆ ತೆರೆದಿರುತ್ತದೆ. ಎರಡೂ ದಿನಗಳಲ್ಲಿ ಸಂದರ್ಶಕರಿಗೆ ಉಚಿತ ಪ್ರವೇಶವಿದೆ.

ಈ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ನವೆಂಬರ್ 10 ರಂದು ಶ್ರೀಮತಿ ಗುಂಜನ್ ಕೃಷ್ಣ, ಭಾ.ಆ.ಸೇ, ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಮತ್ತು ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ರವರು ನೆರವೇರಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Exit mobile version