Site icon MOODANA Web Edition

ಕಾಂಬೋಡಿಯಾ ದೇಶಕ್ಕೆ ಕೆಲಸದ ನಿಮಿತ್ತ ತೆರಳಿ ಸಮಸ್ಯೆಗೆ ಸಿಲುಕಿದ್ದ ಯುವಕರನ್ನು ಸ್ವದೇಶಕ್ಕೆ ಕರೆತರುವಲ್ಲಿ ಯಶಸ್ವಿ : ಶ್ರೀಮತಿ ಆರತಿ ಕೃಷ್ಣ

ಬೆಂಗಳೂರು, ನವೆಂಬರ್ 06 (ಕರ್ನಾಟಕ ವಾರ್ತೆ) :

ಕಾಂಬೋಡಿಯಾ ದೇಶಕ್ಕೆ ಕೆಲಸದ ನಿಮಿತ್ತ ತೆರಳಿ ಸಮಸ್ಯೆಗೆ ಸಿಲಿಕಿದ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಮಾಗುಂಡಿ ಗ್ರಾಮದ ಯುವಕ ಅಶೋಕ್ ಹಾಗೂ ಕೋಲಾರ ಮೂಲದ ಜಯಪಾಲ್ ಶಂಕರ್‍ನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರಲು ಯಶಸ್ವಿಯಾಗಿದ್ದೇವೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಆರತಿ ಕೃಷ್ಣ ತಿಳಿಸಿದರು.

ಅವರು ಇಂದು ಬಹುಮಹಡಿ ಕಟ್ಟಡದ ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯುವಕರುಗಳ ಪಾಸ್‍ಪೋರ್ಟ್ ಮತ್ತು ವೀಸಾವನ್ನು ಸಂಸ್ಥೆಯ ವಶದಲ್ಲಿಟ್ಟುಕೊಂಡು, ಅವರುಗಳನ್ನು ಸ್ವದೇಶಕ್ಕೆ ಮರಳಲು ಅವಕಾಶ ನೀಡದೆ ಕಿರುಕುಳ ಹಾಗೂ ಹಣದ ಬೇಡಿಕೆ ಇಟ್ಟಿದ್ದರು.


ಈ ಮಾಹಿತಿಯನ್ನು ಪೋಷಕರು ಅನಿವಾಸಿ ಭಾರತೀಯ ಸಮಿತಿ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ಸಮಿತಿಯ ಉಪಾಧಯಕ್ಷೆಯಾದ ನಾನು ನವದೆಹಲಿಗೆ ತೆರಳಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಂಬಂಧಪಟ್ಟ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಹಾಗೂ ಕಾಂಬೋಡಿಯಾ ದೇಶದ ಭಾರಯೀಯ ರಾಯಭಾರಿ ಕಚೇರಿ ಮಖ್ಯಸ್ಥರ ಗಮನಕ್ಕೆ ತಂದು ಅಶೋಕ ಮತ್ತು ಜಯಪಾಲ್ ಜಯಶಂಕರ್ ರವರನ್ನು ಸ್ವದೇಶಕ್ಕೆ ಕರೆತರಲು ಯಶಸ್ವಿಯಾಗಿದ್ದೇನೆ ಎಂದರು.


ಹಲವಾರು ಭಾರತೀಯರು ವಿವಿಧ ವೀಸಾ ವಿಭಾಗಗಳಲ್ಲಿ ಮತ್ತು ನಕಲಿ ಉದ್ಯೋಗಗಳ ಜಾಹೀರಾತುಗಳನ್ನು ನಂಬಿ ಕಾಂಬೋಡಿಯಾ ದೇಶಕ್ಕೆ ಬಂದು ಮಾನವÀ ಸಾಗಾಣಿಕೆ ಏಜೆಂಟರ ಬಲೆಗೆ ಸಿಲುಕಿ ಬೇರೆ ದಾರಿಯಿಲ್ಲದೆ ವಿವಿಧ ರೀತಿಯ ಅಪರಾಧ ಮತ್ತು ಇತರೆ ಆರ್ಥಿಕ ವಂಚನೆ ಜಾಲತಾಣಗಳಿಗೆ ಮಾರಾಟ ಮಾಡುತ್ತಾರೆ ಹಾಗೂ ಅವರ ಪಾಸ್ ಪೋರ್ಟ್ ಮತ್ತು ವೀಸಾಗಳನ್ನು ಅವರ ವಶದಲ್ಲಿಟ್ಟುಕೊಂಡು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಾರೆ.  ಇಂತಹ ಮೋಸದ ಬಲೆಗೆ ಸಿಲುಕಿ ಕಾಂಬೋಡಿಯಾ ದೇಶಕ್ಕೆ ಬರುವ ಮುನ್ನ ಎಚ್ಚರವಹಿಸುವಂತೆ ಕಾಂಬೋಡಿಯಾ ದೇಶದ ಭಾರತೀಯ ರಾಯಭಾರಿ ಕಚೇರಿಯವರು ಅವರ ವೆಬ್‍ಸೈಟ್‍ನಲ್ಲಿ ಸೂಚನೆಯನ್ನೂ ನೀಡಿರುತ್ತಾರೆ.


ಹೊರದೇಶಕ್ಕೆ ಕೆಲಸ ಅಥವಾ ವಿದ್ಯಾಭ್ಯಾಸಕ್ಕಾಗಿ ತೆರಳುವ ಮುನ್ನ ಅನಿವಾಸಿ ಭಾರತೀಯ ಸಮಿತಿ ಕಚೇರಿಯ ಅಧಿಕೃತ ಜಾಲತಾಣ www.nriforum.karnataka.gov.in ನಲ್ಲಿ ಆನ್‍ಲೈನ್ ನೋಂದಣಿ ಮಾಡಿಕೊಳ್ಳತಕ್ಕದ್ದು ಹಾಗೂ ತಮ್ಮ ಕುಟುಂಬದವರಿಗೆ ಏಜೆನ್ಸಿ, ಕಂಪನಿ, ಶಿಕ್ಷಣ ಸಂಸ್ಥೆ ಮತ್ತು ವಾಸವಿರುವ ಸ್ಥಳದ ಬಗ್ಗೆ ಮಾಹಿತಿ ನೀಡಬೇಕು.


ತಮ್ಮ ಕುಂದು-ಕೊರತೆಗಳನ್ನು ವಿದೇಶಾಂಗ ವ್ಯಹಾರಗಳ ಸಚಿವಾಲಯದ “MADAD”  ಎಂಬ ಕಾನ್ಸುಲರ್ ಸೇವೆಗಳ ನಿರ್ವಹಣಾ ಪೋರ್ಟಲ್‍ನಲ್ಲಿ  ಆನ್‍ಲೈನ್‍ನಲ್ಲಿ ನೊಂದಾಯಿಸಿಕೊಳ್ಳುವುದು.  ಹೊರದೇಶಕ್ಕೆ ತೆರಳುವ ಮುನ್ನ ಅಧಿಕೃತ ಏಜೆನ್ಸಿಯೇ ಎಂದು ಪರಿಶೀಲಿಸಿ ತೆರಳಿ ಹಾಗೂ ಸದರಿ ದೇಶದ ಭಾರತೀಯ ಕಚೇರಿಯ ಬಗ್ಗೆ ಮಾಹಿತಿಯನ್ನು ಪಡೆಬೇಕು ಎಂದರು.


ಹೆಚ್ಚಿನ ಮಾಹಿತಿಗಾಗಿ ಉಪಾಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ, 3ನೇ ಮಹಡಿ, 4ನೇ ಹಂತ ಬಹುಮಹಡಿ ಕಟ್ಟಡ, ಇ-ಮೇಲ್ msnriforum@karnataka.gov.in ಅಥವಾ msnriforum@gmail.com  ದೂರವಾಣಿ ಸಂಖ್ಯೆ:          080 – 22372020 ನ್ನು ಸಂಪರ್ಕಿಸಬಹುದು ಎಂದರು.


ಇದೇ ಸಂದರ್ಭದಲ್ಲಿ ಕಾಂಬೋಡಿಯಾದಿಂದ ಮರಳಿದ ಅಶೋಕ್ ಅಲ್ಲಿ ಅನುಭವಿಸಿದ ಕಿರುಕುಳದ ಬಗ್ಗೆ ಮಾತನಾಡಿದರು.
   ಪತ್ರಿಕಾ ಗೋಷ್ಠಿಯಲ್ಲಿ ಶಾಸಕರಾದ ರಾಜುಗೌಡÀ, ಸಮಿತಿಯ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಮ್ಮ ಉಪಸ್ಥಿತರಿದ್ದರು.

Exit mobile version